
ಚಿತ್ರದುರ್ಗ(ಜ.25): ತಂಬೂರಿ ಹಿಡಿದುಕೊಂಡು ಮನೆ ಮನೆಗೂ ಬಂದು ಮಹಾಭಾರತದ ಕಥೆಗಳನ್ನು ಹೇಳುತ್ತಾ ಭೀಕ್ಷೆ ಬೇಡುತ್ತಿದ್ದ ಕಿನ್ನರ ಜೋಗಿಗಳು, ಕರ್ನಾಟಕದ ಜನಪದ ಶೈಲಿಯನ್ನು ನಾಳೆ ಇಡೀ ದೇಶಕ್ಕೇ ಪರಿಚಯಿಸಲಿದ್ದಾರೆ.
ನಾಳೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್'ನಲ್ಲಿ ಭಾಗವಹಿಸಲಿರುವ ಈ ಕಿನ್ನರ ಜೋಗಿಗಳು ಕನ್ನಡಿಗರ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಎನ್ ದೇವರಹಳ್ಳಿಯಲ್ಲಿ ವಾಸವಾಗಿರುವ ಈ ಕಿನ್ನರ ಜೋಗಿಗಳ ಸಮುದಾಯದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.
ಆಕರ್ಷಕ ವೇಷ ಭೂಷಣ ಧರಿಸಿಕೊಂಡು, ಅಲೆಮಾರಿಗಳಂತೆ ಬದುಕುವ ಇವರು ಈಗ ದೆಹಲಿ ಪರೇಡ್'ನಲ್ಲಿ ಭಾಗಿಯಾಗಲಿದ್ದಾರೆ. ಇಂತಹ ಸುವರ್ಣ ಅವಕಾಶ ಸಿಕ್ಕಿರುವುದರಿಮದ ಇಡೀ ಹಾಡಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.