ಸೀಮೆಎಣ್ಣೆ ವ್ಯಾಪಾರಿಗಳಿಗೆ ಇನ್ನು ಸಿಲಿಂಡರ್ ಮಾರಾಟ ಭಾಗ್ಯ?

By Suvarna Web DeskFirst Published Feb 13, 2017, 7:08 AM IST
Highlights

ಮಾಸಿಕ 75 ಸಾವಿರ ಲೀಟರ್'ಗಿಂತ ಕಡಿಮೆ ಸೀಮೆಎಣ್ಣೆ ಮಾರಾಟ ಮಳಿಗೆಗಳಲ್ಲಿ 5 ಕೆಜಿ ತೂಕದ ಎಲ್'ಪಿಜಿ ಸಿಲಿಂಡರ್'ಗಳು ಮಾರಾಟಕ್ಕೆ ಲಭ್ಯವಾಗಲಿದೆ.  

ನವದೆಹಲಿ(ಫೆ.13): ಸೀಮೆ ಎಣ್ಣೆ ಬಳಕೆ ಕಡಿಮೆ ಮಾಡಲು ನಾನಾ ಯೋಜನೆಗಳನ್ನು ರೂಪಿಸುತ್ತಿರುವ ಕೇಂದ್ರ ಸರ್ಕಾರ, ಇದೀಗ ಸೀಮೆಎಣ್ಣೆ ಮಾರಾಟ ಮಳಿಗೆಗಳಲ್ಲಿ 5 ಕೆ.ಜಿ ತೂಕದ ಚಿಕ್ಕ ಅಡುಗೆ ಅನಿಲದ ಸಿಲಿಂಡರ್ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದೆ.

ಸೀಮೆಎಣ್ಣೆ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ, ಪಂಜಾಬ್ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ವಿಶೇಷ ಅನುದಾನ ನೀಡುತ್ತಿರುವ ಹಿನ್ನೆಲೆಯಲ್ಲಿ, ಹೊಸ ಯೋಜನೆ ಕೂಡಾ ಕರ್ನಾಟಕದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಹೀಗಾದಲ್ಲಿ ಮಾಸಿಕ 75 ಸಾವಿರ ಲೀಟರ್'ಗಿಂತ ಕಡಿಮೆ ಸೀಮೆಎಣ್ಣೆ ಮಾರಾಟ ಮಳಿಗೆಗಳಲ್ಲಿ 5 ಕೆಜಿ ತೂಕದ ಎಲ್'ಪಿಜಿ ಸಿಲಿಂಡರ್'ಗಳು ಮಾರಾಟಕ್ಕೆ ಲಭ್ಯವಾಗಲಿದೆ.  

ಸೀಮೆಎಣ್ಣೆ ಬಳಕೆ ಕಡಿಮೆ ಆದ ಬಳಿಕ ಮಾರಾಟಗಾರರು ಆದಾಯ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಹೊಸ ಯೋಜನೆ ಅವರಿಗೂ ಆರ್ಥಿಕವಾಗಿ ಲಾಭ ತರಲಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಅಭಿಪ್ರಾಯಪಟ್ಟಿದೆ.      

click me!