
ಕೊಟ್ಟಾಯಮ್[ಸೆ.26] ಮಾಥ್ಯೂ ಮನಾವತ್ ಬಿಜೆಪಿ ಸೇರುವ ವಿಚಾರವನ್ನು ಅಲ್ಲಗಳೆದಿದ್ದಾರೆ. ಜನರು ಮತ್ತು ಮಾಧ್ಯಮಗಳು ಇಂಥ ಸುದ್ದಿಯ ಪೂರ್ವಾಪರ ತಿಳಿಯದೆ ಪ್ರಕಟ ಮಾಡಬಾರದು ಎಂದಿದ್ದಾರೆ.
ಕೇರಳದ ಪಾದ್ರಿಗಳು ಬಿಜೆಪಿ ಸೇರಿದ್ದಾರೆ ಎಂದು ಎಲ್ಲ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು. ಮಾಥ್ಯೂ ಮನಾವತ್ , ಜಾಕೋಬ್ ಸಿರಿಯನ್ ಚರ್ಚ್ನ ಗೀವರ್ಗೀಸ್, ಥಾಮಸ್ ಕುಲತುಂಕಲ್ ಬಿಜೆಪಿ ಸೇರಿದ್ದಾರೆ ಎನ್ನಲಾಗಿತ್ತು. ಇದಾದ ಮೇಲೆ ಬಿಜೆಪಿ ಸಹ ಮಾಥ್ಯೂ ಮನಾವತ್ ಅವರ ಹೆಸರನ್ನು ಫೇಸ್ ಬುಕ್ ನಿಂದ ತೆಗೆದು ಹಾಕಿದೆ.
ಒಟ್ಟಿನಲ್ಲಿ ಈ ಸುದ್ದಿ ಇವತ್ತಿನ ಮಟ್ಟಿಗೆ ಕೇರಳದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನೆರೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಇಂಥದ್ದೊಂದು ಸುದ್ದಿಯೂ ಉಹಾಪೋಹಗಳ ಪ್ರವಾಹ ಸೃಷ್ಟಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.