ಕೇರಳ ಪ್ರವಾಹ: ಇಂದು ಮೋದಿ ನೆರೆ ಪರಿಶೀಲನೆ

By Web DeskFirst Published Aug 18, 2018, 9:30 AM IST
Highlights

ಮೋದಿ ಶುಕ್ರವಾರ ರಾತ್ರಿಯೇ ಕೇರಳಕ್ಕೆ ಧಾವಿಸಿದ್ದರು. ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ರಾಜ್ಯದಲ್ಲಿ ಸಂಭವಿಸಿರುವ ಅನಾಹುತವನ್ನು ಅರಿಯುವ ಪ್ರಯತ್ನ ಮಾಡಲಿದ್ದಾರೆ. ಈ ಪರಿಶೀಲನೆ ಬಳಿಕ ಪ್ರಧಾನಿ, ರಾಜ್ಯಕ್ಕೆ ಹೆಚ್ಚುವರಿ ಪರಿಹಾರ ಪ್ರಕಟಿಸುವ ನಿರೀಕ್ಷೆ ಇದೆ. 

ಕೊಚ್ಚಿ[ಆ.18]: ಕಳೆದೊಂದು ವಾರದಲ್ಲಿ 300ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು, ಲಕ್ಷಾಂತರ ಜನರನ್ನು ನಿರ್ವಸಿತರಾಗಿ ಮಾಡಿರುವ ಕೇರಳದ ಮುಂಗಾರು ಮಳೆಯ ಪ್ರಕೋಪವನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಲು ಇದೀಗ ಕೊಚ್ಚಿಗೆ ಬಂದಿಳಿದಿದ್ದಾರೆ.

ಇದನ್ನು ಓದಿ: ಕೇರಳಕ್ಕೆ ಪ್ರಧಾನಿ ಭೇಟಿ.. ನೀವು ನೆರವು ನೀಡಬಹುದು

ಮೋದಿ ಶುಕ್ರವಾರ ರಾತ್ರಿಯೇ ಕೇರಳಕ್ಕೆ ಧಾವಿಸಿದ್ದರು. ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ರಾಜ್ಯದಲ್ಲಿ ಸಂಭವಿಸಿರುವ ಅನಾಹುತವನ್ನು ಅರಿಯುವ ಪ್ರಯತ್ನ ಮಾಡಲಿದ್ದಾರೆ. ಈ ಪರಿಶೀಲನೆ ಬಳಿಕ ಪ್ರಧಾನಿ, ರಾಜ್ಯಕ್ಕೆ ಹೆಚ್ಚುವರಿ ಪರಿಹಾರ ಪ್ರಕಟಿಸುವ ನಿರೀಕ್ಷೆ ಇದೆ. 

ಇದನ್ನು ಓದಿ: ಮಗಳ ನಿಶ್ಚಿತಾರ್ಥ ರದ್ದು ಮಾಡಿ ನೆರೆ ಪರಿಹಾರಕ್ಕೆ ದೇಣಿಗೆ ನೀಡಿದ ಪತ್ರಕರ್ತ

ಕಳೆದ ವಾರ ಕೇಂದ್ರ ರಾಜ್ಯಕ್ಕೆ 100 ಕೋಟಿ ರು. ತುರ್ತು ಪರಿಹಾರ ಘೋಷಿಸಿತ್ತು. ಆದರೆ ಅಂದಾಜು 8000 ಕೋಟಿ ರು. ನಷ್ಟ ಅನುಭವಿಸಿರುವ ರಾಜ್ಯಕ್ಕೆ ಈ ಪರಿಹಾರ ಮೊತ್ತ ತೀರಾ ಕಡಿಮೆ ಎಂದು ಆರೋಪಿಸಲಾಗಿತ್ತು.

ಇದನ್ನು ಓದಿ: ಕೊಡಗು ನೆರೆ ಸಂತ್ರಸ್ತರಿಗೆ ಸುವರ್ಣ ನ್ಯೂಸ್ ಸಹಾಯಹಸ್ತ : ನೀವೂ ನೆರವಾಗಿ

ಕಳೆದ 9 ದಿನಗಳಿಂದ ಸುರಿಯುತ್ತಿರುವ ಎಡಬಿಡದೇ ಮಳೆ ಹಾಗೂ ಪ್ರವಾಹದಲ್ಲಿ 324 ಮಂದಿ ಮೃತಪಟ್ಟಿದ್ದು, ಎರಡು ಲಕ್ಷ ಮಂದಿ ನಿರ್ಗತಿಕರಾಗಿದ್ದಾರೆ. ಇಲ್ಲಿಯವರೆಗೆ 42 ನೇವಿ, 16 ಆರ್ಮಿ, 28 ಕೋಸ್ಟ್ ಗಾರ್ಡ್ ಹಾಗೂ 39 ಎನ್’ಡಿಆರ್’ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

click me!