
ಬೆಂಗಳೂರು[ಆ.16] ಕೇರಳದ ಮಹಾಮಳೆಗೆ ಸದಾ ಸ್ಪಂದಿಸುತ್ತಲೇ ಬಂದಿರುವ ಏಶಿಯಾನೆಟ್ ನ್ಯೂಸ್ ಗೆ ಮೆಚ್ಚುಗೆ ಸೂಚಿಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜಾಹೀರಾತು ಬ್ರೇಕ್ ಗಳನ್ನು ಪಕ್ಕಕ್ಕಿಟ್ಟು ಸಂಸ್ಥೆ ನೊಂದವರಿಗೆ ನ್ಯಾಯ ಒದಗಿಸಿಕೊಡುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಶಿ ತರೂರ್ ಏಷಿಯಾನೆಟ್ ನ್ಯೂಸ್ ನ್ನು ಕೊಂಡಾಡಿದ್ದಾರೆ. ಮಾಧ್ಯಮಗಳು ಇದೆ ಬಗೆಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಕೇರಳದಲ್ಲಿ ವರುಣನ ಆರ್ಭಟ ನಿಂತಿಲ್ಲ. 4-5 ದಿನಗಳಿಂದೀಚೆಗೆ ಮಳೆಯಿಂದಾಗಿ 67ಕ್ಕೇರಿದೆ. ಪ್ರಧಾನಿ ಮೋದಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಲಘು ವಿಮಾನಗಳನ್ನು ಬಳಕೆಗೆ ಪರವಾನಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಕೇರಳ ಪ್ರವಾಹದಿಂದ ಸಮಸ್ತವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಏಷ್ಯಾನೆಟ್ ನ್ಯೂಸ್ ಚಾರಿಟೇಬಲ್ ಸಂಸ್ಥೆಯೊಂದನ್ನು ಆರಂಭಿಸಿದ್ದು, ಜನರು ಉದಾರವಾಗಿ ದನ ಸಹಾಯ ಮಾಡಬಹುದು. ತಿರುವನಂತಪುರಮ್ನ ಕಾರ್ಪೋರೇಷನ್ ಬ್ಯಾಂಕ್ಗೆ ಹಣ ವರ್ಗಾವಣೆ ಮಾಡಬಹುದಾಗಿದ್ದು, ಇಲ್ಲಿದೆ ಡೀಟೈಲ್ಸ್...
Asianet News Charitable Trust
510331001274314
Corporation Bank Thiruvananthapuram Main Branch
IFSC CORP0000070
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.