
ತಿರುವನಂತಪುರಂ: ಕೇರಳದ ಪ್ರದೇಶ ಕಾಂಗ್ರೆಸ್ ಕಚೇರಿ ಆನ್ ಲೈನ್ ನಲ್ಲಿ ಮಾರಾಟಕ್ಕಿದೆ. ಅದು ಕೇವಲ 10 ಸಾವಿರ ರೂಪಾಯಿಗೆ ಮಾತ್ರ! ಕೇರಳದಲ್ಲಿ ವಿಚಿತ್ರ ರಾಜಕಾರಣದ ಬೆಳವಣಿಗೆಗಳು ನಡೆಯುತ್ತಿದ್ದರೆ ಕಿಡಿಗೇಡಿಯೊಬ್ಬ ಅನೀಶ್ ಎಂಬ ಹೆಸರಿನಲ್ಲಿ ತಿರುವನಂತಪುರದ ಕೆಪಿಸಿಸಿ ಕಚೇರಿಯ ಚಿತ್ರವನ್ನು ಒಎಲ್ ಎಕ್ಸ್ ಗೆ ಅಪ್ ಲೋಡ್ ಮಾಡಿದ್ದು ದರ ಸಹ ನಿಗದಿ ಮಾಡಿದ್ದಾನೆ.
ಅಲ್ಲದೇ ಖರೀದಿ ಮಾಡಲು ಬಯಸುವವರು ಇಂಡಿಯನ್ ಯುನಿಯನ್ ಮುಸ್ಲೀಂ ಲೀಗ್ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾನೆ. ಕಚೇರಿಯ ಸುತ್ತಳತೆ ಸೇರಿದಂತೆ ಎಲ್ಲ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ. ಕಿಡಿಗೇಡಿ ಮಾಡಿರುವ ಈ ಕೆಲಸಕ್ಕೆ ಕಾಂಗ್ರೆಸ್ ಕಚೇರಿ ಮಾರಾಟಕ್ಕೆ ಬಂದು ನಿಂತಿದ್ದು ಕೇರಳ ಕಾಂಗ್ರೆಸ್ ಇಲ್ಲಿಯವರೆಗೆ ಯಾವ ಪ್ರತಿಕ್ರಿಯೆ ನೀಡಿಲ್ಲ.
ಕೇರಳದಲ್ಲಿ ನಡೆಯುತ್ತಿರುವ ರಾಜಕಾರಣದ ಬದಲಾವಣೆಗಳೆ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ರಾಜ್ಯಸಭಾ ಸ್ಥಾನವನ್ನು ಕೇರಳ ಕಾಂಗ್ರೆಸ್(ಎಂ)ಗೆ ಬಿಟ್ಟುಕೊಟ್ಟಿತ್ತು. ಕೇರಳ ವಿಧಾನಸಭೆ ಚುನಾವಣಾ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಯುಡಿಎಫ್ ಆರೋಪಿದಕ್ಕೆ ಯುಡಿಎಫ್ ಮೈತ್ರಿ ತೊರೆದು 2016ರಲ್ಲಿ ಕಾಂಗ್ರೆಸ್ ಹೊರ ಬಂದಿತ್ತು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಯುಡಿಎಫ್ ನೊಂದಿಗೆ ಸೇರಲು ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್ ನ ಈ ದಿನಕ್ಕೊಂದು ನಡತೆಯನ್ನು ಗಮನಿಸಿದ ಕಿಡಿಗೇಡಿ ಕಾಂಗ್ರೆಸ್ ಕಚೇರಿಯನ್ನೇ ಮಾರಾಟಕ್ಕೆ ಇಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.