
ಹೈದ್ರಾಬಾದ್ (ಮೇ 26) : ರಾಜ್ಯದ ಪ್ರತಿಯೊಬ್ಬ ರೈತರಿಗೂ ತಲಾ 5 ಲಕ್ಷ ಜೀವ ವಿಮೆ ಸೌಲಭ್ಯ ನೀಡುವುದಾಗಿ ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ.
ಇದೇ ವರ್ಷದ ಆಗಸ್ಟ್ 15ರಿಂದ ಈ ಹೊಸ ಯೋಜನೆಯು ಜಾರಿಗೆ ನಿರ್ಧರಿಸಲಾಗಿದ್ದು, ವಿಮಾ ಕಂಪನಿಗಳು ಹಾಗೂ ತಮ್ಮ ಸಂಪುಟದ ಸಚಿವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರ ಶೇಖರ್ ರಾವ್ ಹೇಳಿದ್ದಾರೆ.
ಈ ವಿಮೆಯ ಸಂಪೂರ್ಣ ಹಣವನ್ನೂ ಕೂಡ ತೆಲಂಗಾಣ ಸರ್ಕಾರವೇ ಭರಿಸುತ್ತದೆ. 18ರಿಂದ 59 ವರ್ಷ ವಯಸ್ಸಿನ ಪ್ರತೀಯೊಬ್ಬ ರೈತರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಚಂದ್ರ ಶೇಖರ್ ರಾವ್ ಹೇಳಿದ್ದಾರೆ.
ಪ್ರತೀ ವರ್ಷ ಆಗಸ್ಟ್ ತಿಂಗಳಲ್ಲಿ ವಿಮೆಯ ಪ್ರೀಮಿಯಂ ಪಾವತಿ ಮಾಡಲಾಗುತ್ತದೆ. ಇನ್ನು ಯಾವುದೇ ರೈತರು ಮೃತಪಟ್ಟಾಗ ಅದರ ಹಣವು ನಾಮಿನಿಗೆ 10 ದಿನಗಳಲ್ಲೇ ಸೇರುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.