
ಶಿವಮೊಗ್ಗ: ಅಂದಿನ ಪರಿಸ್ಥಿತಿಯಲ್ಲಿ ದಲಿತರ ಹೆಣ್ಣು ಮಕ್ಕಳು ರವಿಕೆಯನ್ನು, ಬ್ಲೌಸ್’ನ್ನು ಹಾಕುವಂತಿರಲಿಲ್ಲ ಅದನ್ನು ಹಾಕುವಂತೆ ಮಾಡಿದ್ದು ಮಹಾನ್ ನಾಯಕ ಟಿಪ್ಪು, ಸಾಮಾಜಿಕ ನ್ಯಾಯಕ್ಕೆ . ದಲಿತರ ಪರವಾದ ದೊರೆಯಾಗಿದ್ದ ಎಂದು ಶಿವಮೊಗ್ಗದಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಕಾಂಗ್ರೆಸ್ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶೃಂಗೇರಿ ಮಠ ಯಾರದ್ದು ? ಟಿಪ್ಪುವಿನದ್ದಾ? ಮುಸ್ಲಿಂಮರದ್ದಾ? ಅಲ್ಲ ಟಿಪ್ಪು ಅಲ್ಲಿನ ದಿನನಿತ್ಯದ ಅನ್ನ ಸಂತರ್ಪಣೆಗೆ ವರ್ಷಪೂರ್ತಿ ನಡೆಸಲು ಹಣ ನೀಡುತ್ತಿದ್ದ. ನಂಜನಗೂಡಿನ ನಂಜುಂಡನಿಗೆ ಪೂಜೆ ಸಲ್ಲಿಸುತ್ತಿದ್ದ ಟಿಪ್ಪು ಧರ್ಮ ವಿರೋಧಿನಾ? ಶೃಂಗೇರಿ ಮಠವನ್ನು ಹಾಳು ಮಾಡಿದ್ದು ಯಾರು? ಟಿಪ್ಪು ಸಹಾಯ ಮಾಡಿದ್ದಕ್ಕೆ ಧರ್ಮ ವಿರೋಧಿಯಾದ. ಟಿಪ್ಪು ಸುಲ್ತಾನ್ ಮಾದರಿಯಲ್ಲಿ ಸಿಎಂ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದು ಅವರು ಕೂಡ ಟಿಪ್ಪು ಸುಲ್ತಾನ್ ಎಂದು ಶಾಸಕ ಹೋಲಿಕೆ ಮಾಡಿದರು.
ಚುನಾವಣೆ ಬಂದಾಗ ಟಿಪ್ಪು ಖಡ್ಗ ಹಿಡಿದು ಕೊಳ್ಳೋದು , ಟಿಪ್ಪು ಡ್ರೆಸ್ ಹಾಕೋದು, ಜಗದೀಶ್ ಶೆಟ್ಟರ್ ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆಯೋದು ಮಾಡಿದರೇ ಯಡಿಯೂರಪ್ಪನವರು ಯೂನಿಫಾರಂ ಹಾಕ್ಕೊಂಡು ಬಂದಿದ್ದರೆಂದು ಲೇವಡಿ ಮಾಡಿದರು.
ಇತಂಹವರು ಟಿಪ್ಪು ಜಯಂತಿ ವಿರೋಧಿಸುತ್ತಿದ್ದು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ಬರಿ ಬೇಡ ಅಂತಾರೆ. ಕತ್ತೆ ಬಾಲ ನಿಮ್ಮ ಹೆಸರು ಬೇಡ , ಬಿಡ್ತೀವಿ ನಮ್ಮ ಇನ್ವಿಟೇಶನ್’ಗೂ ಬೆಲೆ ಕಡಿಮೆಯಾಗುತ್ತೆ ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.