![[ವೈರಲ್ ಚೆಕ್] ಅಮೆರಿಕ, ಕೆನಡಾದಲ್ಲಿ ಎರಡೆರಡು ಸೂರ್ಯನ ಉದಯ!](https://static.asianetnews.com/images/w-412,h-232,imgid-c784f0cf-39b6-4dfb-a2b9-63832bf95b92,imgname-image.jpg)
ಇಡೀ ಪ್ರಪಂಚಕ್ಕೆ ಒಬ್ಬನೇ ಸೂರ್ಯ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಇತ್ತೀಚೆಗೆ ಅಮೆರಿಕ ಮತ್ತು ಕೆನಡಾದಲ್ಲಿ ಎರಡೆರಡು ಸೂರ್ಯ ಕಂಡಿದೆಯಂತೆ! ಅಲ್ಲಿನ ಜನ ಎರಡೆರಡು ಸೂರ್ಯ ಉದಯವಾಗೋದನ್ನು ಕಣ್ಣಾರೆ ಕಂಡಿದ್ದಾರಂತೆ.
ಇಂಥದ್ದೊಂದು ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಚರ್ಚೆಯಾಗುತ್ತಿದೆ. ಇದು ಪ್ರಪಂಚದ ಅದ್ಭುತಗಳಲ್ಲೊಂದು ಎಂದು ಸಹ ಬಣ್ಣಿಸಲಾಗುತ್ತಿದೆ. ಅಲ್ಲದೆ ನಾಸಾ ಎರಡು ಸೂರ್ಯ ಇರುವ ವಿಚಾರವನ್ನು ಮುಚ್ಚಿಟ್ಟಿದ್ದಿಯಾ ಎಂದೂ ಕೂಡಾ ಚರ್ಚೆಯಾಗುತ್ತಿದೆ.
ಹಾಗಾದರೆ ನಿಜವಾಗಿಯೂ ಕೆನಡಾ ಮತ್ತು ಅಮೆರಿಕದಲ್ಲಿ ಎರಡೆರಡು ಸೂರ್ಯ ಉದಯವಾಗಿತ್ತಾ ಎಂಬುದು ಎಲ್ಲರ ಕುತೂಹಲದ ಪ್ರಶ್ನೆ. ಆದರೆ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟಾಗ ತಿಳಿದ ಸತ್ಯವೇ ಬೇರೆ.
ಇದು ಮತ್ತೊಂದು ಸೂರ್ಯ ಉದಯವಾಗಿರುವುದಲ್ಲ. ಅಲ್ಲದೆ ಈ ರೀತಿಯ ಘಟನೆ ಇದೇ ಮೊದಲಲ್ಲ. ಇದೇ ರೀತಿ ಹಿಂದೆಯೂ ಎರಡೆರಡು ಸೂರ್ಯ ಕಾಣಿಸಿಕೊಂಡಿತ್ತು ಎಂಬ ವದಂತಿ ಹಬ್ಬಿತ್ತು. ಆದರೆ ಇದು ಅಂತಹ ವಿಸ್ಮಯವೇನೂ ಅಲ್ಲ. ಇದನ್ನು ‘ಹಂಟರ್ ಮೂನ್’ ಎಂದು ಕರೆಯಲಾಗುತ್ತದೆ. ಸೂರ್ಯಾಸ್ತ ಮತ್ತು ಚಂದ್ರೋದಯ ಒಂದೇ ಕೋನದಲ್ಲಿ ಪರಸ್ಪರ ವಿರುದ್ಧವಾಗಿ ಉಂಟಾದಾಗ ಚಂದ್ರನ ಮೇಲೆ ಸೂರ್ಯ ಪ್ರತಿಫಲನಗೊಂಡಾಗ ಇನ್ನೊಂದು ಸೂರ್ಯ ಕಂಡಂತೆ ಭಾಸವಾಗುತ್ತದೆ.
ಇದನ್ನು ಕಂಡು ಜನರು ಇನ್ನೊಂದು ಸೂರ್ಯ ಎಂದು ತಪ್ಪಾಗಿ ತಿಳಿದು ವದಂತಿ ಹಬ್ಬಿಸಿದ್ದಾರೆ. ಹಾಗಾಗಿ ಕೆನಡಾ ಮತ್ತು ಅಮೆರಿಕಾದಲ್ಲಿ ಎರಡೆರಡು ಸೂರ್ಯನ ಉದಯವಾಗಿದೆ ಎಂಬ ಸುದ್ದಿ ಸುಳ್ಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.