ಬದುಕಿ ಬರಲಿಲ್ಲ ಕಾವೇರಿ: 54 ಗಂಟೆಗಳ ನಂತರ ಮೃತದೇಹ ಹೊರಕ್ಕೆ

Published : Apr 24, 2017, 06:24 PM ISTUpdated : Apr 11, 2018, 12:49 PM IST
ಬದುಕಿ ಬರಲಿಲ್ಲ ಕಾವೇರಿ: 54 ಗಂಟೆಗಳ ನಂತರ ಮೃತದೇಹ ಹೊರಕ್ಕೆ

ಸಾರಾಂಶ

ಕೊಳವೆ ಬಾವಿಯಲ್ಲಿ 25 ಅಡಿ ಆಳದಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯ ಮೃತದೇಹವನ್ನು ಎನ್'ಡಿಆರ್'ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಝುಂಜಾವಾಡ ಗ್ರಾಮದಲ್ಲಿ ಏ.22 ಶನಿವಾರ ಸಂಜೆ 5.30ರ ಸುಮಾರಿಗೆ ಆಟವಾಡುತ್ತಿದ್ದಾಗ ಬೋರ್'ವೆಲ್ ಒಳಗೆ ಬಿದ್ದಿದ್ದಳು.  

ಬೆಳಗಾವಿ(ಏ.24): ರಾಜ್ಯದ ಲಕ್ಷಾಂತರ ಜನರ ಪ್ರಾರ್ಥನೆ ಫಲಗೂಡಲಿಲ್ಲ. ತಮ್ಮನ ಜೊತೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದ ಕಾವೇರಿ ಕೊನೆಗೂ ಹೊರ ಬಂದಿದ್ದು ಮೃತದೇಹವಾಗಿ. ಸತತ 54 ಗಂಟೆಗಳ ನಂತರ 300 ಅಡಿ ಕೊಳವೆ ಬಾವಿಯಲ್ಲಿ 25 ಅಡಿ ಆಳದಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯ ಮೃತದೇಹವನ್ನು ಎನ್'ಡಿಆರ್'ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಝುಂಜಾವಾಡ ಗ್ರಾಮದಲ್ಲಿ ಏ.22 ಶನಿವಾರ ಸಂಜೆ 5.30ರ ಸುಮಾರಿಗೆ ಆಟವಾಡುತ್ತಿದ್ದಾಗ ಬೋರ್'ವೆಲ್ ಒಳಗೆ ಬಿದ್ದಿದ್ದಳು.  

ತಮ್ಮನ ಜೊತೆ ಆಟವಾಡುತ್ತಾ ಬಂದ ಕಾವೇರಿ ಶನಿವಾರನೆ ಸಂಜೆ 5.30 ರ ಸುಮಾರಿಗೆ ಬೋರ್ ವೆಲ್ ಒಳಗೆ ಬಿದ್ದಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಕೊಳವೆ ಬಾವಿಯಿಂದ ಕಾವೇರಿ ಧ್ವನಿ ತಾಯಿ ಸವಿತಾಳಿಗೆ ಕೇಳಿಸಿದ್ದು, ಮಗಳನ್ನು ಮೇಲೆತ್ತಲು ಹಗ್ಗ ಬಿಟ್ಟು ಯತ್ನಿಸಿದ್ದಾಳೆ. ನಂತರ ಸ್ಥಳೀಯರ ಯತ್ನ ಕೂಡ ವಿಫಲವಾಗಿದೆ. ರಾತ್ರಿ 8 ಗಂಟೆ ಸುಮಾರಿಗೆ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ, ಕಾರ್ಯಾಚರಣೆ ಕೈಗೊಂಡು, 8. 30ರ ಸುಮಾರಿಗೆ ಜೆಸಿಬಿ ಮೂಲಕ ಪರ್ಯಾಯ ಸುರಂಗ ಮಾರ್ಗ ಕೊರೆಯೋ ಕಾರ್ಯ ಆರಂಭವಾಗಿತ್ತು.

ಸುಮಾರು 9.30ರ ವೇಳೆಗೆ ಕಾವೇರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಯಿತು. ಆದರೆ ಜಮೀನಿನಲ್ಲಿನ ಬಂಡೆಕಲ್ಲುಗಳು ಕಾರ್ಯಾಚರಣೆಗೆ ತೊಡಕಾದವು. 11.30ರ ವೇಳೆಗೆ ಹಟ್ಟಿ ಗಣಿ ಸಿಬ್ಬಂದಿ ಕೂಡ ಕಾರ್ಯಾಚರಣೆಗೆ ಆಗಮಿಸಿದ್ದರು. ಬಳಿಕ ರಾತ್ರಿ 1 ರ ಸುಮಾರಿಗೆ  NDRF ಸಿಬ್ಬಂದಿಯು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ಮುಂದುವರೆಸಿದರು. ಆದರೆ ಬೃಹತ್ ಬಂಡೆ  ಅಡ್ಡಲಾಗಿದ್ದರಿಂದ ವಿಳಂಬಗೊಂಡ ಕಾರಣ ಕಾರ್ಯಚರಣೆಯನ್ನ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

ಸ್ಥಗಿತಗೊಂಡಿದ್ದ ಕಾರ್ಯಾಚರಣೆಯನ್ನ ನಿನ್ನೆ ಮುಂಜಾನೆ 5ಕ್ಕೆ ಪುನರಾರಂಭಿಸಿದ್ದು, ಕೆಲ ಹೊತ್ತಿನಲ್ಲೇ ಬೋರ್ ವೆಲ್ ಒಳಗೆ ಕಾವೇರಿಯ ಬಟ್ಟೆ ಕಂಡು ಬಂತು. ನಂತರ ಸಕ್ಕಿಂಗ್ ಬಳಸಿ ಮಣ್ಣು ತೆಗೆಯುವ ಪ್ರಯತ್ನವು ವಿಫಲವಾಯಿತು. 8.20ರಿಂದ 10ರ ವರೆಗೂ ಹುಕ್ ಬಳಕೆಯ ಮೂಲಕ ಕಾವೇರಿಯನ್ನು ಮೇಲೆತ್ತುವ ಎಲ್ಲಾ ಯತ್ನಗಳು ಕೈ ಕೊಟ್ಟಿವು. ನಂತರ ಮಧ್ಯಾಹ್ನ 1.20ರ ಸುಮಾರಿಗೆ ಕಾರ್ಯಾಚರಣೆ ತೀವ್ರಗೊಂಡು, ಸಂಜೆ 4 ರ ವೇಳೆಗೆ ಅಡ್ಡಿಯಾದ ಕಲ್ಲುಗಳನ್ನು ಪುಡಿಗೊಳಿಸಲು 3 ಬೋರ್ ಕೊರೆಯಿಸಲು ತೀರ್ಮಾನಿಸಲಾಯ್ತು. ನಂತ್ರ ಸಂಜೆ 6.20 ರವೇಳೆಗೆ ಕೊನೆಯ ಪರ್ಯಾಯವಾಗಿ ಸುರಂಗ ಮಾರ್ಗವನ್ನು ಕೊರೆಯಲು ನಿರ್ಧರಿಸಿ, ಕಾವೇರಿ ಬಿದ್ದಿರುವ ಬಾವಿ ಸುತ್ತ 20 ಬೋರ್'ಗಳನ್ನು ಕೊರೆಯಲು ನಿರ್ಧರಿಸಲಾಯಿತು.

  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!