IOK ಸ್ವಾತಂತ್ರ್ಯಕ್ಕಾಗಿ ಪಣ: ಇಮ್ರಾನ್ ಭಾಷಣದಲ್ಲಿ ಬರೀ ಪುರಾಣ!

Published : Aug 15, 2019, 04:12 PM IST
IOK ಸ್ವಾತಂತ್ರ್ಯಕ್ಕಾಗಿ ಪಣ: ಇಮ್ರಾನ್ ಭಾಷಣದಲ್ಲಿ ಬರೀ ಪುರಾಣ!

ಸಾರಾಂಶ

ಪಾಕಿಸ್ತಾನ 73ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ| ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಸಪ್ಪೆ| ಸ್ವಾತಂತ್ರ್ಯ ಭಾಷಣದ ಮೂಲಕ ರಾಜಕೀಯ ಅಪ್ರಬುದ್ಧತೆ ಪ್ರದರ್ಶಿಸಿದ ಇಮ್ರಾನ್ ಖಾನ್| ಭಾರತ ಆಕ್ರಮಿತ ಆಕ್ರಮಿತ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದಾಗಿ ಹೇಳಿದ ಇಮ್ರಾನ್| ಕಾಶ್ಮೀರದ ಜನತೆಯ ಮೇಲೆ ಭಾರತ ಸರ್ಕಾರದಿಂದ ದೌರ್ಜನ್ಯವಂತೆ| ಮೋದಿ ಅಂತಿಮ ಆಟ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಲಿದೆಯಂತೆ| 'ವಿಶೇಷ ಸ್ಥಾನಮಾನ ರದ್ದತಿಯಿಂದಾಗಿ ಕಾಶ್ಮೀರಗರ ಮೇಲೆ ಹೆಚ್ಚಿದ ದೌರ್ಜನ್ಯ'| RSS ಸಿದ್ಧಾಂತದಿಂದಾಗಿ ಭಾರತ ಮತ್ತೊಮ್ಮೆ ವಿಭಜನೆಯಾಗಲಿದೆ ಎಂದ ಇಮ್ರಾನ್|

ಇಸ್ಲಾಮಾಬಾದ್(ಆ.15): 'ಭಾರತ ಆಕ್ರಮಿತ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬ ಪಾಕಿಸ್ತಾನಿ ಬಲಿದಾನಕ್ಕೆ ಸಿದ್ದವಿದ್ದು, ಕಾಶ್ಮೀರಿ ಜನರ ಮೇಲೆ ಭಾರತ ನಡೆಸುತ್ತಿರುವ ದೌರ್ಜನ್ಯಕ್ಕೆ ಇತಿಶ್ರೀ ಹಾಡುವ ಸಮಯ ಸನ್ನಿಹಿತವಾಗಿದೆ.....' ಇದು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿದ ಭಾಷಣದ ಪರಿ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರವನ್ನು ಟೀಕಸಿರುವ ಇಮ್ರಾನ್ ಖಾನ್, ಇದರಿಂದ ಕಾಶ್ಮೀರಿಗರ ಮೇಲೆ ದೌರ್ಜನ್ಯ ಮತ್ತಷ್ಟು ಹೆಚ್ಚಲಿದೆ ಎಂದು ಗುಡುಗಿದ್ದಾರೆ.

ಭಾರತದ ಪ್ರಧಾನಿ ಮೋದಿ ಅವರ ಈ ಅಂತಿಮ ಆಟ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಲಿದ್ದು, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಭಾರತದ ವಿರುದ್ಧ ಯುದ್ಧ ಸಾರಲು ಪಾಕಿಸ್ತಾನ ಸಿದ್ಧವಿದೆ ಎಂದು ಇಮ್ರಾನ್ ಖಾನ್ ಘೋಷಿಸಿದ್ದಾರೆ.

ಇದೇ ವೇಳೆ RSS ಸಿದ್ಧಾಂತವನ್ನು ಟೀಕಿಸಿರುವ ಇಮ್ರಾನ್, ಕಾಶ್ಮೀರದಲ್ಲಿ ಮತ್ತು ಗುಜರಾತ್‌ನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿರುವ ಸಂಘಟನೆಯೇ ಭಾರತದಲ್ಲಿ ಆಡಳಿತ ನಡೆಸುತ್ತಿದ್ದು, ಇದರಿಂದ ಮತ್ತೊಂದು ವಿಭಜನೆಗೆ ಭಾರತೀಯ ಮುಸ್ಲಿಂ ನಾಯಕರು ಸಿದ್ಧರಾಗಿದ್ದಾರೆ ಎನ್ನುವ ಮೂಲಕ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!