ಶತ್ರು ವಿಮಾನ ಹೊಡೆದುರುಳಿಸಿದ ಇಬ್ಬರಿಗೆ ಪಾಕ್ ಸೇನಾ ಮೆಡಲ್!

By Web DeskFirst Published Aug 15, 2019, 3:53 PM IST
Highlights

73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಪಾಕಿಸ್ತಾನ| ಭಾರತದ ಯುದ್ಧ ವಿಮಾನ ಹೊಡೆದುರುಳಿಸಿದ ಪಾಕ್ ವಾಯುಪಡೆ ಅಧಿಕಾರಿಗಳಿಗೆ ಪ್ರಶಸ್ತಿ| ಪಾಕ್ ಅತ್ಯುನ್ನತ ಸೇನಾ ಮೆಡಲ್'ಗೆ ಪಾತ್ರರಾದ ಅಧಿಕಾರಿಗಳು| ವಿಂಗ್ ಕಮಾಂಡರ್ ಮೊಹ್ಮದ್ ನೌಮನ್ ಆಲಿ ಅವರಿಗೆ ಸಿತಾರ್-ಇ- ಜುರಾತ್ ಪ್ರಶಸ್ತಿ| ಸ್ಕ್ವಾಡ್ರನ್ ಲೀಡರ್ ಹಸನ್ ಮೊಹ್ಮದ್ ಸಿದಿಕ್ಕಿಗೆ ತಂಘಾ- ಇ- ಸುಜಾತ್ ಪ್ರಶಸ್ತಿ| ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಚಲಾಯಿಸುತ್ತಿದ್ದ ಮನಿಗ್-21 ಹೊಡೆದುರುಳಿಸಿದ್ದ ಅಧಿಕಾರಿಗಳು|

ಇಸ್ಲಾಮಾಬಾದ್(ಆ.15): ಭಾರತದಂತೆ ನೆರೆಯ ಪಾಕಿಸ್ತಾನ ಕೂಡ 73ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಭಾರತದ ಯುದ್ಧ ವಿಮಾನ ಹೊಡೆದುರುಳಿಸಿದ್ದ ಇಬ್ಬರು ಪಾಕಿಸ್ತಾನ ವಾಯುಸೇನೆಯ ಇಬ್ಬರು ಪೈಲೆಟ್'ಗಳಿಗೆ ಅತ್ಯುನ್ನತ ಸೇನಾ ಮೆಡಲ್ ನೀಡಿ ಗೌರವಿಸಲಾಗಿದೆ.

ಕಳೆದ ಫೆಬ್ರವರಿ 27 ರಂದು ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಚಲಾಯಿಸುತ್ತಿದ್ದ ಮಿಗ್-21 ಯುದ್ಧ ವಿಮಾನ ಹೊಡೆದುರುಳಿಸಿದ್ದ ಪಾಕಿಸ್ತಾನದ ವಿಂಗ್ ಕಮಾಂಡರ್ ಮೊಹ್ಮದ್ ನೌಮನ್ ಆಲಿ ಅವರಿಗೆ ಸಿತಾರ್-ಇ- ಜುರಾತ್  ಹಾಗೂ ಸ್ಕ್ವಾಡ್ರನ್ ಲೀಡರ್ ಹಸನ್ ಮೊಹ್ಮದ್ ಸಿದಿಕ್ಕಿ ಅವರಿಗೆ ತಂಘಾ- ಇ- ಶುಜಾತ್ ಪ್ರಶಸ್ತಿ ಘೋಷಿಸಲಾಗಿದೆ.

ಮುಂದಿನ ವರ್ಷ ಮಾರ್ಚ್ 23ರಂದು ನಡೆಯಲಿರುವ ಪಾಕಿಸ್ತಾನ ಡೇ ಸಂದರ್ಭದಲ್ಲಿ ಇಬ್ಬರೂ ಅಧಿಕಾರಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು  ಪಾಕಿಸ್ತಾನ ಸೇನೆ ತಿಳಿಸಿದೆ.

click me!