ಪಾಕ್‌ ಶೆಲ್‌ ದಾಳಿಗೆ ಗಾಯಗೊಂಡಿದ್ದ 10 ದಿನದ ಮಗು ಸಾವು!

Published : Jul 30, 2019, 08:40 AM IST
ಪಾಕ್‌ ಶೆಲ್‌ ದಾಳಿಗೆ ಗಾಯಗೊಂಡಿದ್ದ 10 ದಿನದ ಮಗು ಸಾವು!

ಸಾರಾಂಶ

ಕಾಶ್ಮೀರದಲ್ಲಿ ಪಾಕ್‌ ಶೆಲ್‌ ದಾಳಿಗೆ ಗಾಯಗೊಂಡಿದ್ದ 10 ದಿನದ ಮಗು ಸಾವು| ಕಾಶ್ಮೀ​ರದ ಪೂಂಚ್‌ ಜಿಲ್ಲೆಯ ಶಹಾ​ಪುರ ಸೆಕ್ಟ​ರ್‌​ನಲ್ಲಿ ಘಟನೆ

ಜಮ್ಮು[ಜು.30]: ಜಮ್ಮು-ಕಾಶ್ಮೀ​ರದ ಗಡಿ​ರೇ​ಖೆ​ಗುಂಟ ಪಾಕಿ​ಸ್ತಾ​ನದ ಸೇನೆ ನಡೆ​ಸು​ತ್ತಿ​ರುವ ಅಪ್ರ​ಚೋ​ದಿತ ಗುಂಡಿನ ದಾಳಿ, ಮಾರ್ಟರ್‌ ಹಾಗೂ ಶೆಲ್‌ ದಾಳಿಗೆ 10 ದಿನ​ಗಳ ಹಸು​ಗೂ​ಸೊಂದು ಸೋಮ​ವಾರ ಬಲಿ​ಯಾ​ದ ಹೃದಯ ವಿದ್ರಾ​ವಕ ಘಟನೆ ನಡೆ​ದಿದೆ.

ಕಾಶ್ಮೀ​ರದ ಪೂಂಚ್‌ ಜಿಲ್ಲೆಯ ಶಹಾ​ಪುರ ಸೆಕ್ಟ​ರ್‌​ನಲ್ಲಿ ಈ ಘಟನೆ ಭಾನು​ವಾರ ತಡ​ರಾತ್ರಿ ನಡೆ​ದಿದೆ. ಪಾಕ್‌ ಕಡೆ​ಯಿಂದ ನಡೆದ ತೀವ್ರ​ತ​ರ​ವಾದ ಶೆಲ್‌ ದಾಳಿ​ಯಿಂದ ಮಗು, ಅದರ ತಾಯಿ ಫಾತಿಮಾ ಜಾನ್‌ (35) ಹಾಗೂ ಇನ್ನೋರ್ವ ನಾಗ​ರೀಕ ಮೊಹ​ಮ್ಮದ್‌ ಆರೀಫ್‌ (40) ಗಾಯ​ಗೊಂಡಿ​ದ್ದರು.

ಕೂಡಲೇ ಪೂಂಚ್‌ ಜಿಲ್ಲಾ​ಸ್ಪ​ತ್ರೆಗೆ ಮಗು​ವನ್ನು ದಾಖ​ಲಿ​ಸ​ಲಾ​ಯಿ​ತಾ​ದರೂ ಚಿಕಿತ್ಸೆ ಫಲಿ​ಸದೇ ಮಗು ಸಾವ​ನ್ನ​ಪ್ಪಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಚಿವ ದಿನೇಶ್‌ ಗುಂಡೂರಾವ್‌ ಕಾರ್ಯಕ್ರಮದ ವೇಳೆ ಅಗ್ನಿ ಅವಘಡ
ಮುಂಬೈ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್‌? ಕೇಸರಿ ಪಕ್ಷದ ಬಹುದೊಡ್ಡ ಕನಸು ನನಸಾಗುತ್ತಾ..