
ಬೆಂಗಳೂರು[ಜು.22] ಸನ್ಮಾನ್ಯ ಅಧ್ಯಕ್ಷರೆ ಸದನದಲ್ಲಿ ಮಹಿಳೆಯರಿದ್ದಾಋಎ, ವಯಸ್ಸಾದವರಿದ್ದಾರೆ ದಯವಿಟ್ಟು ಚರ್ಚೆಯನ್ನು ನಾಳೆ ಬೆಳಗ್ಗೆಗೆ ಮುಂದೂಡಿ ಎಂದು ದೋಸ್ತಿ ಪಕ್ಷದ ಮಹಿಳಾ ಶಾಸಕಿ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಹೇಳಿದ್ದು ಸದನದಲ್ಲಿ ಮತ್ತೊಂದು ಸುತ್ತಿನ ಗೊಂದಲಕ್ಕೆ ವೇದಿಕೆ ಮಾಡಿಕೊಟ್ಟಿತು.
ಅತ್ತ ರಾತ್ರಿ ಊಟಕ್ಕಾಗಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಹೊರನಡೆದರೆ, ಇತ್ತ ಮಹಿಳಾ ಶಾಸಕಿಯರು ಹೈರಾಣಾಗಿದ್ದಾರೆ. ಕೆಜಿಎಫ್ ಶಾಸಕಿ ರೂಪಾ ಶಶಿಧರ್, ಸದನದಲ್ಲಿ ಮಹಿಳೆಯರಿದ್ದಾರೆ, ವಯಸ್ಸಾದವರಿದ್ದಾರೆ, ಮಾನವೀಯತೆಯ ದೃಷ್ಟಿಯಿಂದಾದರೂ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿ ಎಂದು ಉಪ-ಸಭಾಪತಿ ಕೃಷ್ಣಾರೆಡ್ಡಿಯವರಿಗೆ ಮನವಿಮಾಡಿಕೊಂಡರು. ಅದಕ್ಕೆ ಇತರ ಶಾಸಕಿಯರೂ ಧ್ವನಿಗೂಡಿಸಿದರು.
ಕಾಂಗ್ರೆಸ್ ಶಾಸಕಿಯರ ಈ ಬೇಡಿಕೆಗೆ ಬಿಜೆಪಿ ಶಾಸಕಿಯರು ತಿರುಗೇಟು ನೀಡಿದರು. ಇಲ್ಲಿ ಎಲ್ಲಾ ವ್ಯವಸ್ಥೆ ಇದೆ, ನಾವು ಎಷ್ಟು ಹೊತ್ತಾದರೂ ಇರಲು ರೆಡಿಯಾಗಿದ್ದೀವಿ. ಮೊದಲು ವಿಶ್ವಾಸ ಮತದ ಚರ್ಚೆಯಾಗಲಿ ಎಂದು ಬಿಜೆಪಿ ಶಾಸಕಿಯರು ಪಟ್ಟು ಹಿಡಿದರು. ಸದನ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.