ಕರ್ನಾಟಕಕ್ಕೆ ಜಯ ತಂದಿತ್ತ ವಿವಾದದ ಆ 2 ರನ್..!

By Suvarna Web DeskFirst Published Jan 12, 2018, 1:42 PM IST
Highlights

ಸಯ್ಯದ್ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ20 ಪಂದ್ಯಾವಳಿಯಲ್ಲಿ ಕರ್ನಾಟಕ ಪುಟಿದೆದ್ದಿದೆ. ಕಳೆದ ಪಂದ್ಯದಲ್ಲಿ ಆಂಧ್ರ ವಿರುದ್ಧ ಸೋತಿದ್ದ ರಾಜ್ಯ ತಂಡ ಗುರುವಾರ ಇಲ್ಲಿ ಹೈದರಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 2 ರನ್‌ಗಳ ರೋಚಕ ಗೆಲುವು ಸಾಧಿಸಿತು.

ವಿಶಾಖಪಟ್ಟಣಂ (ಜ.12): ಸಯ್ಯದ್ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ20 ಪಂದ್ಯಾವಳಿಯಲ್ಲಿ ಕರ್ನಾಟಕ ಪುಟಿದೆದ್ದಿದೆ. ಕಳೆದ ಪಂದ್ಯದಲ್ಲಿ ಆಂಧ್ರ ವಿರುದ್ಧ ಸೋತಿದ್ದ ರಾಜ್ಯ ತಂಡ ಗುರುವಾರ ಇಲ್ಲಿ ಹೈದರಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 2 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, ಕರುಣ್ ನಾಯರ್ ಹಾಗೂ ಕೆ.ಗೌತಮ್‌ರ ಅರ್ಧಶತಕಗಳ ನೆರವಿನಿಂದ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಬೃಹತ್ ಗುರಿ ಬೆನ್ನಟ್ಟಿದ ಹೈದರಾ ಬಾದ್‌ಗೆ ಆರಂಭಿಕ ಅಕ್ಷತ್ ರೆಡ್ಡಿ ಆಸರೆಯಾದರು. ಕೇವಲ 29 ಎಸೆತಗಳಲ್ಲಿ 70 ರನ್ ಸಿಡಿಸಿ ಮಿಂಚಿ ದರು. ಆದರೆ 11ನೇ ಓವರ್‌ನಿಂದ ಮುಂದಕ್ಕೆ ಹೈದರಾಬಾದ್ ಸತತವಾಗಿ ವಿಕೆಟ್ ಕಳೆದು ಕೊಳ್ಳುತ್ತಾ ಸಾಗಿತು. ಕೊನೆ ಓವರ್‌ನಲ್ಲಿ 8 ರನ್‌ಗಳ ಅಗತ್ಯವಿತ್ತು. ಆದರೆ ಬಿನ್ನಿ ಅವರ ಆಕರ್ಷಕ ಪ್ರದರ್ಶನದಿಂದ ಕರ್ನಾಟಕ ಜಯಿಸಿತು. 

ಕರ್ನಾಟಕ ಇನ್ನಿಂಗ್ಸ್‌ನ 2ನೇ ಓವರ್‌ನ 4ನೇ ಎಸೆತದಲ್ಲಿ ಬೌಂಡರಿ ಗೆರೆ ಬಳಿ ಚೆಂಡನ್ನು ಹಿಡಿದ ಕ್ಷೇತ್ರರಕ್ಷಕ ಮೆಹದಿ, ತಮ್ಮ ಕಾಲನ್ನು ಬೌಂಡರಿ ಗೆರೆಗೆ ತಾಕಿಸಿದ್ದರು. ಇದನ್ನು ಪರಿಶೀಲಿಸದ ಅಂಪೈರ್, ಕರ್ನಾಟಕಕ್ಕೆ ಕೇವಲ 2 ರನ್ ಮಾತ್ರ ನೀಡಿದ್ದರು. ಆದರೆ ಇನ್ನಿಂಗ್ಸ್ ಮುಕ್ತಾಯದ ಬಳಿಕ ರಾಜ್ಯದ ಮೊತ್ತಕ್ಕೆ 2 ರನ್ ಸೇರ್ಪಡೆಗೊಳಿಸಲಾಯಿತು. ಇದು ಎದುರಾಳಿ ನಾಯಕ ರಾಯುಡು ಸಿಟ್ಟಿಗೆ ಕಾರಣವಾಯಿತು.

click me!