ಜ. 20 ರಿಂದ ಬ್ಯಾಂಕುಗಳಲ್ಲಿ ಉಚಿತ ಸೇವೆ ಇರಲ್ಲ, ಎಲ್ಲದಕ್ಕೂ ಬೀಳಲಿದೆ ಶುಲ್ಕ!

Published : Jan 12, 2018, 01:25 PM ISTUpdated : Apr 11, 2018, 12:55 PM IST
ಜ. 20 ರಿಂದ ಬ್ಯಾಂಕುಗಳಲ್ಲಿ ಉಚಿತ ಸೇವೆ ಇರಲ್ಲ, ಎಲ್ಲದಕ್ಕೂ ಬೀಳಲಿದೆ ಶುಲ್ಕ!

ಸಾರಾಂಶ

ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2018 ಜನವರಿ 20 ರಿಂದ ಉಚಿತ ಸೇವೆ ನೀಡುವುದನ್ನು ನಿಲ್ಲಿಸಲಿವೆ ಎಂಬ ಸುದ್ದಿಯೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಸಾರ್ವಜನಿಕ ಬ್ಯಾಂಕುಗಳು ಉಚಿತ ಸೇವೆಯನ್ನು ನಿಲ್ಲಿಸಲಿರುವುದು ನಿಜವೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯ ಹೊರಟಾಗ ಇದರ ಅಸಲಿ ಕತೆ ಬಯಲಾಯಿತು. ಏಕೆಂದರೆ ಸಾರ್ವಜನಿಕ ಬ್ಯಾಂಕುಗಳು ಜನವರಿ ೨೦ರಿಂದ ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಸುದ್ದಿಯನ್ನು ಬ್ಯಾಂಕ್‌ಗಳ ಸಂಘವು(ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್) ನಿರಾಕರಿಸಿದೆ.

ಬೆಂಗಳೂರು (ಜ.12): ಸಾರ್ವಜನಿಕ ವಲಯದ ಬ್ಯಾಂಕ್‌ಗಳು 2018 ಜನವರಿ 20 ರಿಂದ ಉಚಿತ ಸೇವೆ ನೀಡುವುದನ್ನು ನಿಲ್ಲಿಸಲಿವೆ ಎಂಬ ಸುದ್ದಿಯೊಂದು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ  ಸುದ್ದಿ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಸಾರ್ವಜನಿಕ ಬ್ಯಾಂಕುಗಳು ಉಚಿತ ಸೇವೆಯನ್ನು ನಿಲ್ಲಿಸಲಿರುವುದು ನಿಜವೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯ ಹೊರಟಾಗ ಇದರ ಅಸಲಿ ಕತೆ ಬಯಲಾಯಿತು. ಏಕೆಂದರೆ ಸಾರ್ವಜನಿಕ ಬ್ಯಾಂಕುಗಳು ಜನವರಿ ೨೦ರಿಂದ ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಸುದ್ದಿಯನ್ನು ಬ್ಯಾಂಕ್‌ಗಳ ಸಂಘವು(ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್) ನಿರಾಕರಿಸಿದೆ.

ಇಂತಹ ಯಾವುದೇ ಕ್ರಮಗಳನ್ನು  ತೆಗೆದುಕೊಂಡಿಲ್ಲ ಎಂದು ಐಬಿಎ ಸ್ಪಷ್ಟೀಕರಣ ನೀಡಿದೆ. ಅಲ್ಲದೆ ಸಾರ್ವಜನಿಕರು ಇಂತಹ ವಿಷಯಗಳ ಕುರಿತು ಜಾಗರೂಕರಾಗಿರಬೇಕು. ಇಂತಹ ವದಂತಿಗಳು ಹರಡದಂತೆ ಎಚ್ಚರ ವಹಿಸಬೇಕು. ಈ ವದಂತಿಯು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು, ಈ ಕುರಿತ ಯಾವುದೇ ಮಾರ್ಗಸೂಚಿಗಳನ್ನೂ ಆರ್‌ಬಿಐ ನೀಡಿಲ್ಲ ಎಂದಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಆಧಾರ ರಹಿತವಾದದ್ದು, ಸಾರ್ವಜನಿಕ  ಬ್ಯಾಂಕುಗಳು ತಮ್ಮ ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಯಾವುದೇ ಪ್ರಸ್ತಾಪ ಬಂದಿಲ್ಲ’ ಎಂದು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಸ್ಪಷ್ಟೀಕರಣ ನೀಡಿದೆ. ಹಾಗಾಗಿ ಜನವರಿ 20 ರಿಂದ ಬ್ಯಾಂಕುಗಳು ಉಚಿತ ಸೇವೆಯನ್ನು ನಿಲ್ಲಿಸಲಿವೆ ಎಂಬ ಸುದ್ದಿ ಸುಳ್ಳು ಎಂಬಂತಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!