ಕಾಂಗ್ರೆಸ್- ಜೆಡಿಎಸ್ ದೂರಿನನ್ವಯ 14 ಶಾಸಕರ ಅನರ್ಹತೆ| ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಒಟ್ಟು 14 ಶಾಸಕರು ಅನರ್ಹಗೊಂಡಿದ್ದಾರೆ| ಸುದ್ದಿಗೋಷಿಯಲ್ಲಿ ಅನರ್ಹರ ಹೆಸರು ಘೋಷಿಸಿದ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು[ಜು.28]: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಮಹತ್ತರ ಬೆಳವಣಿಗೆಗಳ ಬೆನ್ನಲ್ಲೇ ಸ್ಪೀಕರ್ ರಮೇಶ್ ಕುಮಾರ್ ಮಹತ್ವದ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್- ಜೆಡಿಎಸ್ ದೂರಿನನ್ವಯ 14 ಅತೃಪ್ತ ಶಾಸಕರಿಗೆ ಶಾಕ್ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ಪೀಕರ್ ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್‌ನ 11 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಮೂಲಕ ಒಟ್ಟು 17 ಶಾಸಕರು ಅನರ್ಹಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನಾಳೆ ನಡೆಯಲಿರುವ ಕಲಾಪದಲ್ಲಿ ಅಚ್ಚರಿಯೊಂದನ್ನೂ ನೀಡುವುದಾಗಿ ರಮೇಶ್ ಕುಮಾರ್ ಘೋಷಿಸಿದ್ದಾರೆ.
ಅನರ್ಹಗೊಂಡ ಅತೃಪ್ತ ಶಾಸಕರ ಪಟ್ಟಿ ಹೀಗಿದೆ.
1. ರಮೇಶ್ ಜಾರಕಿಹೊಳಿ, ಗೋಕಾಕ್
2. ಮಹೇಶ್ ಕುಮಟಳ್ಳಿ, ಅಥಣಿ
3. ಶಂಕರ್, ರಾಣೆಬೆನ್ನೂರು
4. ಆನಂದ್ ಸಿಂಗ್, ಹೊಸಪೇಟೆ
5. ವಿಶ್ವನಾಥ್, ಹುಣಸೂರು
6. ಪ್ರತಾಪ್ ಗೌಡ ಪಾಟೀಲ್, ಮಸ್ಕಿ
7. ಬಿ.ಸಿ. ಪಾಟೀಲ್, ಹಿರೆಕೇರೂರು
8. ಶಿವರಾಂ ಹೆಬ್ಬಾರ್, ಯಲ್ಲಾಪುರ
9. ನಾರಾಯಣಗೌಡ, ಕೆಆರ್.ಪೇಟೆ
10. ಎಸ್.ಟಿ. ಸೋಮಶೇಖರ್, ಯಶವಂತಪುರ
11. ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್
12. ಭೈರತಿ ಬಸವರಾಜ್, ಕೆ.ಆರ್.ಪುರಂ
13. ಮುನಿರತ್ನ, ಆರ್.ಆರ್.ನಗರ
14. ರೋಷನ್ ಬೇಗ್, ಶಿವಾಜಿನಗರ
15. ಎಂಟಿಬಿ ನಾಗರಾಜ್, ಹೊಸಕೋಟೆ
16. ಸುಧಾಕರ್, ಚಿಕ್ಕಬಳ್ಳಾಪುರ
17. ಶ್ರೀಮಂತ್ ಪಾಟೀಲ್, ಕಾಗವಾಡ
ಹೀಗಿದ್ದರೂ ರಮೇಶ್ ಕುಮಾರ್ ಶಾಸಕರು ಸಲ್ಲಿಸಿರುವ ರಾಜೀನಾಮೆ ಕುರಿತಾಗಿ ಏನೂ ಹೇಳಿಲ್ಲ ಎಂಬುವುದು ಉಲ್ಲೇಖನೀಯ.
ಇನ್ನು ಇದೇ ಸಂದರ್ಭದಲ್ಲಿ ಬಿಎಸ್ಪಿ ಶಾಸಕ ಮಹೇಶ್ ವಿರುದ್ಧ ಅನರ್ಹತೆ ದೂರಿನ ಬಗ್ಗೆ ಮುಂದಿನ ಸ್ಪೀಕರ್ ನೋಡಿಕೊಳ್ಳುತ್ತಾರೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಸ್ಪೀಕರ್ ತಮ್ಮ ರಾಜೀನಾಮೆ ಸುಳಿವು ನೀಡಿದ್ದು, ನಾಳೆ ಸದನದಲ್ಲೇ ರಾಜೀನಾಮೆ ಘೋಷಿಸ್ತಾರಾ? ಎಂಬ ನುಮಾನ ಹುಟ್ಟು ಹಾಕಿದೆ.