ವಿಶ್ವಾಸ ಮತ ಸಾಬೀತು ಹೇಗೆ ಮಾಡ್ತೀವಿ ಕಾದು ನೋಡಿ ಅಷ್ಟೆ! ಸಿದ್ದರಾಮಯ್ಯ ಆತ್ಮವಿಶ್ವಾಸ

By Web DeskFirst Published Jul 12, 2019, 7:55 PM IST
Highlights

ಸಾಮೂಹಿಕ ರಾಜೀನಾಮೆಯಿಂದ ವಿಶ್ವಾಸ ಮತಯಾಚನೆಗೆ ಹೋದ ರಾಜ್ಯ ರಾಜಕಾರಣ | ಸ್ಪೀಕರ್ ಕಚೇರಿಯಿಂದ ಸುಪ್ರೀಂ ಅಂಗಳಕ್ಕೆ ಶಾಸಕರ ಬಂಡಾಯ ಪ್ರಕರಣ 

ಬೆಂಗಳೂರು (ಜು.12): ಅತಂತ್ರ ಪರಿಸ್ಥಿತಿಯಲ್ಲಿ ದಿನ ದೂಡುತ್ತಿರುವ ಮೈತ್ರಿ ಸರ್ಕಾರ, ವಿಶ್ವಾಸ  ಮತಯಾಚನೆಯ ಅಸ್ತ್ರ ಪ್ರಯೋಗಿಸಿದೆ. ಅತ್ತ ಬಂಡಾಯವೆದ್ದಿರುವ ಶಾಸಕರು ಮುಂಬೈ, ಹೈದ್ರಾಬಾದ್ ಹೋಟೆಲ್‌ಗಳಿಗೆ ಸೇರಿಕೊಂಡಿದ್ದಾರೆ. ಇತ್ತ ಬಿಜೆಪಿಯೂ ತನ್ನ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಿದೆ.

ಶಾಸಕರ ರಾಜೀನಾಮೆ ಅಂಗೀಕಾರ ವಿಚಾರ ಸ್ಪೀಕರ್ ಅಂಗಳದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇನ್ನೊಂದು ಕಡೆ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಮೈತ್ರಿ ಸರ್ಕಾರ ಖುದ್ದಾಗಿ ವಿಶ್ವಾಸಮತ ಯಾಚನೆಗೆ ಹೊರಟಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. 

ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೀವೇ ನೋಡಿ....

 

click me!