ದೋಸ್ತಿ ಸರ್ಕಾರದ ಮತ್ತೊಂದು ವಿಕೆಟ್ ಪತನ, ಸತಾಯಿಸಿದ್ದಕ್ಕೆ ಸೇಡು ಪಡೆದ ಸಚಿವ!

By Web DeskFirst Published Jul 8, 2019, 10:37 AM IST
Highlights

ಮೈತ್ರಿ ಸರ್ಕಾರಕ್ಕೆ ಮತ್ತೊಂದು ಬಿಗ್ ಶಾಕ್| ದೋಸ್ತಿ ಸರ್ಕಾರದ ಮತ್ತೊಂದು ವಿಕೆಟ್ ಪತನ| ಸತಾಯಿಸಿ ಸಚಿವ ಸ್ಥಾನ ನೀಡಿದ್ದಕ್ಕೆ ಸೇಡು..! 

ಬೆಂಗಳೂರು[ಜು.08]: ದೋಸ್ತಿ ಸರ್ಕಾರಕ್ಕೆ ಒಂದಾದ ಬಳಿಕ ಮತ್ತೊಂದರಂತೆ ಬಿಸಿ ತಟ್ಟುತ್ತಿದೆ. ಆನಂದ್ ಸಿಂಗ್ ರಾಜೀನಾಮೆಯಿಂದ ಶುರುವಾದ ಕಂಟಕ ಮುಂದುವರೆದಿದ್ದು, ಈ ಪಟ್ಟಿಗೆ ಇಂದು ಮತ್ತೊಂದು ಹೆಸರು ಸೇರ್ಪಡೆಗೊಂಡಿದೆ. ಸರ್ಕಾರ ಪತನಗೊಳ್ಳುವ ಸೂಚನೆ ಸಿಕ್ಕ ಸಚಿವರೊಬ್ಬರು ಸದ್ದಿಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಕೈ ಬಿಟ್ಟಿದ್ದಾರೆ. ಎರಡು ವಾರಗಳ ಹಿಂದೆ ಖಾತೆ ದಕ್ಕಿಸಿಕೊಂಡಿದ್ದ ಮುಳಬಾಗಿಲು ಶಾಸಕ ಎಚ್.ನಾಗೇಶ್ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 

ಎಚ್. ನಾಗೇಶ್ ಇತ್ತೀಚೆಗಷ್ಟೇ ಮೈತ್ರಿ ಸರ್ಕಾರದ ಜೊತೆ ಕೈ ಜೋಡಿಸಿದ್ದರು. ಅಲ್ಲದೇ ಸಣ್ಣ ಕೈಗಾರಿಕೆ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೀಗ ಸಚಿವ ಸ್ಥಾನಕ್ಕೆ ಪಡೆದ ಮೂರೇ ವಾರಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ಆಘಾತವುಂಟು ಮಾಡಿದ್ದಾರೆ. 

ನಾವು ಜೋಡೆತ್ತು  ಕಾಂಗ್ರೆಸ್ಗೆ  ಕೈ ಕೊಡಲ್ಲ ಎಂದಿದ್ದ  ನಾಗೇಶ್ ಈಗ ತಮ್ಮೆಲ್ಲಾ ಮಾತುಗಳನ್ನು ಮರೆತು ದೂರ ಸರಿದಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗಲಿರುವ ನಾಗೇಶ್ ಕಾಂಗ್ರೆಸ್ ಸಹ ಸದಸ್ಯತ್ವ ವಾಪಸ್ ಪತ್ರ ಸಲ್ಲಿಸಲಿದ್ದಾರೆ. 

Exclusive: ನೂತನ ಸಚಿವರಿಗೆ ಖಾತೆ ಫಿಕ್ಸ್! ಸಿಎಂ ಕ್ಯಾತೆಗೆ ದೋಸ್ತಿ ಸುಸ್ತು!

ಒಟ್ಟು 13 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೀಗ ಪಕ್ಷೇತರ ಶಾಸಕರೊಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಬಲ ವಾಪಾಸ್ ಪಡೆದಿರುವುದರಿಂದ ಸರ್ಕಾರ ಪತನಗೊಳ್ಳುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

ಕರ್ನಾಟಕ ಪಾಲಿಟಿಕ್ಸ್‌ನ ಇಂಟರೆಸ್ಟಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

click me!