ಮುಂಬೈನಲ್ಲಿ ಬೀಡು ಬಿಟ್ಟ ಅತೃಪ್ತ ಶಾಸಕರಿಗೆ ಮತ್ತೊಂದು ಶಾಕ್!

Published : Jul 12, 2019, 12:02 PM IST
ಮುಂಬೈನಲ್ಲಿ ಬೀಡು ಬಿಟ್ಟ ಅತೃಪ್ತ ಶಾಸಕರಿಗೆ ಮತ್ತೊಂದು ಶಾಕ್!

ಸಾರಾಂಶ

ಅತೃಪ್ತ ಶಾಸಕರಿಗೆ ಮತ್ತೊಂದು ಶಾಕ್| ಅತೃಪ್ತರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಯೂತ್ ಕಾಂಗ್ರೆಸ್ ಅರ್ಜಿ| 400 ಯೂತ್ ಕಾಂಗ್ರೆಸ್ನಿಂದ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ| ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಲು ಕೋರಿ ಅರ್ಜಿ| ಈ ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ| ಈ ಶಾಸಕರ ಅನರ್ಹತೆ ಅರ್ಜಿ ವಿಚಾರಣೆ ಹಂತದಲ್ಲಿದೆ| ಹೀಗಾಗಿ ಈ ಶಾಸಕರನ್ನು ಅನರ್ಹಗೊಳಿಸಬೇಕೆಂದು ಮನವಿ

ಬೆಂಗಳೂರು[ಜು.12]: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಹಸನದಿಂದ ದೋಸ್ತಿ ಸರ್ಕಾರ ಪತನಗೊಳ್ಳುವ ಆತಂಕದಲ್ಲಿದೆ. ಹೀಗಿದ್ದರೂ ಅತೃಪ್ತ ಶಾಸಕರ ತಲೆನೋವು ಮಾತ್ರ ತಪ್ಪಿಲ್ಲ. ದೋಸ್ತಿಗೆ ಸಡ್ಡು ಹೊಡೆಯಲು ಮುಂಬೈನಲ್ಲಿ ಬೀಡು ಬಿಟ್ಟಿರುವ ಶಾಸಕರಿ ಅನರ್ಹತೆ, ವಿಪ್ ಅಸ್ತ್ರಗಳು ತೊಡಕಾಗಿವೆ. ಈ ಕಂಟಕಗಳು ಎದುರಾಗಿರುವ ಬೆನ್ನಲ್ಲೇ ಅತೃಪ್ತ ಶಾಸಕರಿಗೆ ಮತ್ತೊಂದು ಶಾಕ್ ಬಂದೆರಗಿದೆ.

ರಾಜೀನಾಮೆ ನಿಡಿ ಬಮುಂಬೈ ಹೋಟೆಲ್ ಸೇರಿದ್ದ ನಾಯಕರನ್ನು ಮರಳಿ ಕರೆ ತರಲು ದೋಸ್ತಿ ನಾಯಕರು ನಾನಾ ಯತ್ನಗಳನ್ನು ನಡೆಸಿದರು. ಮನವೊಲಿಸುವಲ್ಲಿ ವಿಫಲರಾದಾಗ ಕಾಂಗ್ರೆಸ್ ಪಕ್ಷದ ನಾಯಕರು ಅತೃಪ್ತರ ವಿರುದ್ಧ ಅನರ್ಹತೆಯ ಅಸ್ತ್ರ ಎಸೆದರು. ರಾಜಕೀಯ ಭವಿಷ್ಯ ಕಂಟಕ ಇದ್ದರೂ ಹಠ ಬಿಡದ ನಾಯಕರು ಶಾಸಕಾಂಗ ಸಭೆಗೆ ಹಾಜರಾಗಬೇಕೆಂದು ವಿಪ್ ಕೂಡಾ ಜಾರಿಗೊಳಿಸಿದೆ. ಇವೆಲ್ಲದರ ನಡುವೆ ಇದೀಗ ಅತೃಪ್ತ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೇಳಿ ಯೂತ್ ಕಾಂಗ್ರೆಸ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಶಾಸಕರ ರಾಜೀನಾಮೆ ಪ್ರಜಾಪ್ರತಿನಿಧಿ ಕಾಯಿದೆಗೆ ವಿರುದ್ಧವಾಗಿದೆ. ಹೀಗಾಗಿ ಈ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸುಮಾರು 400 ಯೂತ್ ಕಾಂಗ್ರೆಸ್ ಘಟಕಗಳಿಂದ ಅರ್ಜಿ ಸಲ್ಲಿಸಲಾಗಿದೆ. ಆದರೆ ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!