ಹೇಗೆ ಬೆಳೆದಿರ‌್ತಾರೋ ಹಾಗೆ ಮಾತಾಡ್ತಾರೆ: ಸ್ಪೀಕರ್ ಕಿಡಿ

Published : Jul 20, 2019, 10:47 AM IST
ಹೇಗೆ ಬೆಳೆದಿರ‌್ತಾರೋ ಹಾಗೆ ಮಾತಾಡ್ತಾರೆ: ಸ್ಪೀಕರ್ ಕಿಡಿ

ಸಾರಾಂಶ

ಹೇಗೆ ಬೆಳೆದಿರ‌್ತಾರೋ ಹಾಗೆ ಮಾತಾಡ್ತಾರೆ: ಸ್ಪೀಕರ್ ಕಿಡಿ| ಕಾಂಗ್ರೆಸ್ ಏಜೆಂಟ್ ಎಂದು ಆರೋಪಿಸಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ತಿರುಗೇಟು

ಬೆಂಗಳೂರು[ಜು.20]: ‘ಯಾರು ಹೇಗೆ ಬೆಳೆದು ಬಂದಿರುತ್ತಾರೋ, ಬೆಳೆಯುವ ಹಾದಿ, ನಡತೆ ಹಾಗೂ ಸ್ವಭಾವ ಹೇಗಿರುತ್ತದೆಯೋ ಅದಕ್ಕೆ ಅನುಗುಣವಾಗಿ ಮಾತನಾಡುತ್ತಾರೆ. ನಾನು ಅವರನ್ನು ಮಹಿಳೆ ಎಂಬ ಕಾರಣಕ್ಕೆ ಗೌರವಿಸುತ್ತೇನೆ.’ ತಮ್ಮನ್ನು ಕಾಂಗ್ರೆಸ್ ಏಜೆಂಟ್ ಎಂದು ಆರೋಪಿಸಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ವಿಧಾನಸಭೆ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನೀಡಿದ ತಿರುಗೇಟು ಇದು.

ಸರ್ಕಾರದ ಏಜೆಂಟ್ ರೀತಿ ಸ್ಪೀಕರ್ ವರ್ತನೆ: ಶೋಭಾ

ಬೆಂಗಳೂರಿನಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಅವರ ವರು ಬೆಳೆದು ಬಂದ ಹಾದಿ, ಸ್ವಭಾವದಂತೆ ಮಾತನಾಡುತ್ತಾರೆ. ನಾನು ಅವರಿಂದ ಕಲಿಯಬೇಕಿರುವುದು ಏನೂ ಇಲ್ಲ. ನನಗೆ ಮಾರ್ಗದರ್ಶನ ಮಾಡುವ ಹಿರಿಯರು ಬೇರೆ ಇದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರಲು ಎಲ್ಲರಿಗೂ ಅವಕಾಶ ಇದೆ. ಆದರೆ, ನನಗೆ ಹಾಗೂ ಅವರಿಗೆ ಹೊರಗಡೆ ಜನರಿದ್ದಾರೆ ಎಂಬ ಭಯವಾದರೂ ಇರಬೇಕು. ಆ ಭಯ ಇಲ್ಲ ಎಂದರೆ ಏನೂ ಮಾಡಲು ಆಗುವುದಿಲ್ಲ ಎಂದರು

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್‌ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌
ಅನುದಾನಿತ ಶಾಲೆಯಲ್ಲಿ 9ನೇ ಕ್ಲಾಸ್ ಹುಡ್ಗೀರ ಎಣ್ಣೆ ಪಾರ್ಟಿ; ವೈರಲ್ ವಿಡಿಯೋ ಆಧರಿಸಿ 6 ವಿದ್ಯಾರ್ಥಿನಿಯರು ಅಮಾನತು!