ಜ್ಯೋತಿಷಿಗಳ ಭವಿಷ್ಯ, ಮಗನ ಸರ್ಕಾರ ಉಳಿಸಲು ಗೌಡರ ರಣತಂತ್ರ!

By Web DeskFirst Published Jul 20, 2019, 12:55 PM IST
Highlights

ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳ ಸರ್ಕಸ್| ಅತೃಪ್ತ ನಾಯಕರು ಬರಲು ಒಪ್ಪದಿದ್ದರೂ ಸಜ್ಜಾಯ್ತು ದೊಡ್ಡಗೌಡ್ರ ಮಾಸ್ಟರ್ ಪ್ಲಾನ್| ಸುಪ್ರೀಂ ಕದ ತಟ್ಟಲಿದ್ದ ಮಗನನ್ನು ತಡೆದ ದೇವೇಗೌಡರು| ಮಗನಿಗಾಗಿ ಗೌಡರು ಹೆಣೆದ ತಂತ್ರವೇನು? ಇಲ್ಲಿದೆ ನೋಡಿ ಗೌಡರ ಪ್ಲಾನ್!

ಬೆಂಗಳೂರು[ಜು.20]: ವಾರಗಳೆರಡು ಕಳೆದರೂ ರಾಜ್ಯ ರಾಜಕೀಯ ಪ್ರಹಸನ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಅತೃಪ್ತ ಶಾಸಕರ ಮನವೊಲಿಸಿ ಮರಳಿ ಕರೆತರಲು ದೋಸ್ತಿ ನಾಯಕರು ನಾನಾ ಯತ್ನಗಳನ್ನು ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅತ್ತ ಸಚಿವ ರೇವಣ್ಣ ಎಚ್ ಡಿಕೆ ಸರ್ಕಾರ ಉಳಿಯಲಿ ಎಂದು ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸದ್ಯ ವಿಶ್ವಾಸ ಮತ ಯಾಚನೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಹೀಗಿದ್ದರೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಪುತ್ರನ ಸರ್ಕಾರ ಉಳಿಸುವ ಬಹುದೊಡ್ಡ ರಣತಂತ್ರವನ್ನೇ ಹೆಣೆದಿದ್ದಾರೆ.

ಹೌದು ನಾನಾ ಯತ್ನಗಳನ್ನು ನಡೆಸಿದರೂ ಸರ್ಕಾರ ಪತನಗೊಳ್ಳುವುದು ಖಚಿತ ಎಂಬ ಮಾತುಗಳು ಜೋರಗಿವೆ. ಹೀಗಿದ್ದರೂ ದೇವೇಗೌಡರು ಮಗನಿಗಾಗಿ ತ್ಮಮ ಪ್ರಯತ್ನ ಮುಂದುವರೆಸಿದ್ದಾರೆ. ಹೀಗಾಗಿ ಸೋಮವಾರವೂ ವಿಶ್ವಾಸಮತ ಸಾಬೀತುಪಡಿಸುವ ಪ್ರಕ್ರಿಯೆ ನಡೆಯುವುದು ಅನುಮಾನ ಎನ್ನಲಾಗಿದೆ. ಸುಪ್ರೀಂಕೋರ್ಟ್ ರಕ್ಷಣೆಯ ತಂತ್ರ ಹೂಡಿರುವ ದೊಡ್ದಗೌಡ್ರು, ಸುಪ್ರೀಂನಲ್ಲಿ ಜೀವದಾನ ಸಿಕ್ಕಿದ್ರೆ ವಿಶಢ್ವಾಸಮತ ಯಾಚನೆ ಪ್ರಕ್ರಿಯೆ ಇನ್ನಷ್ಟು ಸಮಯ ಮುಂದೂಡುವ ಯೋಜನೆ ರೂಪಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಗೆ ಶನಿವಾರ ಸಂಜೆ ಅರ್ಜಿ ಹಾಕಲು ಸೂಚಿಸಿದ್ದಾರೆ.

ಈ ಮೊದಲು ಸಿಎಂ ಕುಮಾರಸ್ವಾಮಿ ಪರ ವಕೀಲ ಶನಿವಾರ ಬೆಳಗ್ಗೆಯೇ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಲು ಸಿದ್ದತೆ ನಡೆಸಿದ್ದರು. ಆದರೆ ದೇವೇಗೌಡರ ಬಳಿ ಮಾತುಕತೆ ನಡೆಸಿದ ಬಳಿಕ ಸಿಎಂ ಕುಮಾರಸ್ವಾಮಿ ಪ್ಲ್ಯಾನ್ ಚೇಂಜ್ ಮಾಡಿದ್ದಾರೆ ಹಾಗೂ ತಮ್ಮ ವಕೀಲರನ್ನು ಹೀಗೆ ಮಾಡದಂತೆ ತಡೆದಿದ್ದಾರೆ. 

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳಿಗ್ಗೆ ಅರ್ಜಿ ಸಲ್ಲಿಸಿದರೆ ವಿಚಾರಣೆ ಇವತ್ತೇ ನಡೆದು ಸುಪ್ರೀಂಕೋರ್ಟ್ ರಾಜ್ಯಪಾಲರ ಪರ ತೀರ್ಪು ಕೊಟ್ಟರೆ ಕಷ್ಟ. ಹೀಗಾಗಿ ಸಂಜೆವರೆಗೂ ಯಾವುದೇ ಕಾರಣಕ್ಕೂ ಅರ್ಜಿ ಹಾಕಬೇಡ. ಸಂಜೆ ಅರ್ಜಿ ಸಲ್ಲಿಕೆ ಮಾಡಿದ್ರೆ ಸೋಮವಾರ ವಿಚಾರಣೆಗೆ ಬರುತ್ತದೆ. ಸೋಮವಾರ ವಿಚಾರಣೆಯಲ್ಲಿ ರಾಜ್ಯಪಾಲರ ಆದೇಶದಕ್ಕೆ ತಡೆ ನೀಡಿದರೆ ಇನ್ನಷ್ಟು ದಿನ ಸರ್ಕಾರಕ್ಕೆ ಜೀವದಾನ ಸಿಗುವ ಸಾಧ್ಯತೆ ಇದೆ ಎಂದು ದೇವೇಗೌಡರು ತಿಳಿಸಿದ್ದಾರೆನ್ನಲಾಗಿದೆ. ಹೀಗಾಗಿ ತಂದೆಯ ಮಾತಿನಂತೆ ಸಿಎಂ ಕುಮಾರಸ್ವಾಮಿ ಇಂದು ಶನಿವಾರ ಬೆಳಗ್ಗೆ ಸಲ್ಲಿಸಬೇಕಾಗಿದ್ದ ಅರ್ಜಿಯನ್ನು ಸಂಜೆ ಸಲ್ಲಿಸಿದ್ದಾರೆ.

ಹೇಗಾದರೂ ಮಾಡಿ ಮಂಗಳವಾರದವರೆಗೆ ಕಲಾಪ ಮುಂದೂಡುವುದು ದೇವೇಗೌಡರ ಪ್ಲ್ಯಾನ್ ಎಂಬುವುದು ಇಲ್ಲಿ ಸ್ಪಷ್ಟವಾಗುತ್ತದೆ. ಹೀಗಿದ್ದರೂ ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಈ ರಣತಂತ್ರ ಹೆಣೆದಿದ್ದಾರೆಂಬ ಮಾತುಗಳೂ ಜೋರಾಗಿವೆ. ಹೌದು 'ಮಂಗಳವಾರ ಕಳೆದ್ರೆ ಸಿಎಂಗೆ ಯಾವುದೇ ತೊಂದರೆ ಇಲ್ಲ' ಎಂಬುವುದು ಜ್ಯೋತಿಷಿಗಳ ಮಾತಾಗಿದೆಯಂತೆ. 

ಹೇಗಿದ್ದರೂ ಇನ್ನು ಸುಮಾರು 26 ಜನ ಶಾಸಕರು ದೋಸ್ತಿಗಳ ಪಕ್ಷದ ಪರ ಮಾತಾಡುವವರು ಇದ್ದಾರೆ. ಈ ಚರ್ಚೆ ಸಂಜೆವರೆಗೂ ನಡೆಯುವುದು ಖಚಿತ.  ಇತ್ತ ಸಂಜೆ ಒಳಗೆ ಸುಪ್ರೀಂಕೋರ್ಟ್ ಯಾವುದಾದರು ಒಂದು ತೀರ್ಪು ಕೊಡುತ್ತೆ, ತೀರ್ಪು ತಮ್ಮ ಪರ ಬಂದ್ರೆ ತಾವು ಮಾಡಿದ ಪ್ಲ್ಯಾನ್ ನಂತೆ ನಡೆಯುತ್ತೆ ಎನ್ನುವುದು ದೇವೇಗೌಡರ ಲೆಕ್ಕಾಚಾರ.

ಅದೇನಿದ್ದರೂ ಸೋಮವಾರ ಸುಪ್ರೀಂಕೋರ್ಟ್ ವಿಚಾರಣೆ ಸರ್ಕಾರಕ್ಕೆ ಮತ್ತೊಂದು ಸಂಜೀವಿನಿ ಕೊಡುತ್ತಾ? ಮಗನ ಸರ್ಕಾರ ಉಳಿಸಿಕೊಳ್ಳುವ ಗೌಡ್ರ ತಂತ್ರ ಫಲಿಸುತ್ತಾ? ಕಾದು ನೋಡಬೇಕಷ್ಟೇ

click me!