‘ಕಿಡ್ನಾಪ್ ಎಂದು ದಾಂಧಲೆ ಮಾಡಿರುವ ಡಿಕೆಶಿ ಕ್ಷಮೆ ಕೇಳಲಿ’

Published : Jul 20, 2019, 12:40 PM ISTUpdated : Jul 20, 2019, 12:43 PM IST
‘ಕಿಡ್ನಾಪ್ ಎಂದು ದಾಂಧಲೆ ಮಾಡಿರುವ ಡಿಕೆಶಿ ಕ್ಷಮೆ ಕೇಳಲಿ’

ಸಾರಾಂಶ

ರಾಜ್ಯ ರಾಜಕೀಯ ಪ್ರಹಸನ ಮುಂದುವರಿದಿದೆ. ಇದೇ ವೇಳೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದು, ಕಿಡ್ನಾಪ್ ಆರೋಪಕ್ಕೆ ಡಿಕೆಶಿ ಕ್ಷಮೆ ಕೇಳಲು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. 

ಬೆಂಗಳೂರು [ಜು.20]: ಮುಂಬೈನಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಸ್ಪೀಕರ್ ತಂಡ ರಚಿಸಿ ಕಳಿಸಿಕೊಟ್ಟಿದ್ದಾರೆ. ಆದರೆ ಬಿಜೆಪಿಯವರು ಅವರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು. 

ಸದನದಲ್ಲಿ ಡಿ.ಕೆ. ಶಿವಕುಮಾರ್ ಫೋಟೊ ಹಿಡಿದುಕೊಂಡು ದಾಂಧಲೆ ಮಾಡಿದರು. ಇಲ್ಲಸಲ್ಲದ ಆರೋಪ ಮಾಡಿದ್ದಕ್ಕೆ ಕ್ಷಮೆ ಯಾಚಿಸಲಿ ಎಂದು ಯಡಿಯೂರಪ್ಪ ಆಗ್ರಹಿಸಿದರು.

ಈಗಾಗಲೇ ವಿಶ್ವಾಸಮತಕ್ಕೆ ಸಮಯ ನಿಗದಿ ಮಾಡಿದ್ದು, ಸುಪ್ರೀಂ ಸ್ಪಷ್ಟವಾದ ತೀರ್ಪು ನೀಡಿದೆ. ಇನ್ನು ಮೈತ್ರಿ ಪಾಳಯ ವಿಪ್ ಜಾರಿ ಮಾಡಿದಲ್ಲಿ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗುವುದಿಲ್ಲ ಎಂದು ಬಿಎಸ್ ವೈ ಹೇಳಿದರು. 

ಕರ್ನಾಟಕ ರಾಜಕೀಯ ಪ್ರಹಸನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರಕ್ಕೆ ರಾಜ್ಯಪಾಲರು ಸೂಚನೆ ಕೊಟ್ಟಿದ್ದರೂ ಕೂಡ ಅವರಿನ್ನೂ ಬಹುಮತ ಸಾಬೀತು ಪಡಿಸಿಲ್ಲ. ಬಹುಮತ ಇಲ್ಲದಿದ್ದರೆ ಮುಖ್ಯಮಂತ್ರಿಗಳು ಒಂದು ಕ್ಷಣ ಇರಬಾರದು. ಬಹುಮತ ಇದ್ದರೆ ಸಾಬೀತು ಮಾಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ವಾಕ್ ಪ್ರಹಾರ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾಖಲೆಯತ್ತ ಸಿಎಂ ಸಿದ್ದರಾಮಯ್ಯ ಹೆಜ್ಜೆ: 17ನೇ ಬಜೆಟ್‌ನತ್ತ ಎಲ್ಲರ ಚಿತ್ತ
ವಿಪಕ್ಷ ಆಹ್ವಾನ ನನ್ನಿಂದ ಸ್ವೀಕಾರ ಹೇಳಿದೆಡೆಗೆ ಬರಲು ನಾನು ರೆಡಿ: ಡಿಕೆಶಿ ಚಾಲೆಂಜ್