ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು : ಅವರ ಆದಾಯವೆಷ್ಟು ಗೊತ್ತಾ..?

Published : Sep 18, 2018, 10:45 AM ISTUpdated : Sep 19, 2018, 09:28 AM IST
ದೇಶದಲ್ಲೇ ಕರ್ನಾಟಕದ ಶಾಸಕರು ಶ್ರೀಮಂತರು : ಅವರ ಆದಾಯವೆಷ್ಟು ಗೊತ್ತಾ..?

ಸಾರಾಂಶ

ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಸೋಸಿಯೇಶನ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ ಸಂಸ್ಥೆಗಳ ಜಂಟಿ ಅಧ್ಯಯನದಿಂದ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ. ಅದರಲ್ಲಿ ಕರ್ನಾಟಕ ಶಾಸಕರು ಅತ್ಯಂತ ಶ್ರೀಮಂತರು ಎನಿಸಿಕೊಂಡಿದ್ದಾರೆ.   

ನವದಹಲಿ: ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ 1.11 ಕೋಟಿ ರು. ಆಗಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. 

ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಸೋಸಿಯೇಶನ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ ಸಂಸ್ಥೆಗಳ ಜಂಟಿ ಅಧ್ಯಯನದಿಂದ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ. ದೇಶದ ಒಟ್ಟಾರೆ ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರುಪಾಯಿ ಇದೆ. 

ಕರ್ನಾಟಕಕ್ಕೆ ಹೋಲಿಸಿದರೆ ಛತ್ತೀಸ್‌ಗಢ ಶಾಸಕರ ವಾರ್ಷಿಕ ಆದಾಯ ನಗಣ್ಯವಾಗಿದ್ದು, ವಾರ್ಷಿಕ 5.4 ಲಕ್ಷ ರು. ಸರಾಸರಿ ಆದಾಯ ಹೊಂದುವ ಮೂಲಕ ದೇಶದಲ್ಲೇ ಅತಿ ಕನಿಷ್ಠ ಆದಾಯದ ಶಾಸಕರಾಗಿದ್ದಾರೆ. ಅಧ್ಯಯನದಲ್ಲಿ ಕರ್ನಾಟಕದ 224 ಶಾಸಕರ ಪೈಕಿ 203 ಜನರ 
ಆದಾಯವನ್ನು ಅಳೆಯಲಾಗಿದ್ದು, ಇವರ ಸರಾಸರಿ ವಾರ್ಷಿಕ ಆದಾಯ 111.4 ಲಕ್ಷ (1.11ಕೋಟಿ ರುಪಾಯಿ) ಆಗಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ 43.3 ಲಕ್ಷ ರು. ಆಗಿದೆ. ದೇಶದ ಒಟ್ಟಾರೆ 4086 ಹಾಲಿ ಶಾಸಕರ ಪೈಕಿ 3145 ಶಾಸಕರ ಸ್ವಘೋಷಿತ ಆಸ್ತಿ ವಿವರವನ್ನು  ವಿಶ್ಲೇಷಿಸಲಾಗಿದೆ. 941 ಶಾಸಕರು ಆಸ್ತಿಯನ್ನೇ ಘೋಷಿಸಿಕೊಂಡಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!