
ಬೆಂಗಳೂರು(ಮಾ.24): ಅಂದು ಕನ್ನಡಿಗರ ಸ್ವಾಭಿಮಾನ ಕೆಣಕಿದ್ದ ನಟ. ಕನ್ನಡಿಗರನ್ನು ಹೀನಾಯವಾಗಿ ಕಾಣುತ್ತಿದ್ದ ನಟನಿಗೆ ಇವತ್ತು ಕನ್ನಡಿಗರೇ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ತಮಿಳರು ಮತ್ತು ಕನ್ನಡಿಗರ ನಡುವಿನ ಸೌಹಾರ್ದ ಕದಡಿ, ತನ್ನ ಬೇಳೆ ಬೇಯಿಸಿಕೊಂಡಿದ್ದ ಈ ನಟನಿಗೆ ಇವತ್ತು ಅದೇ ಮುಳುವಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಬಾಹುಬಲಿ-2 ನೋಡಲು ಭಾರತೀಯ ಸಿನಿಮಾರಂಗವೇ ಕಾದು ಕೂತಿದೆ. ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ೆನ್ನುವ ಪ್ರಶ್ನೆಗೆ ಉತ್ತರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಇದೇ ಕಟ್ಟಪ್ಪನಿಂದಾಗಿ ಕರ್ನಾಟಕದಲ್ಲಿ ಬಾಹುಬಲಿ-2 ಬಿಡುಗಡೆಗೆ ವಿಘ್ನ ಎದುರಾಗಿದೆ.
ಕಟ್ಟಪ್ಪನಿಗೆ ಎದುರಾಗಿದೆ ವಿರೋಧ
ಅಷ್ಟಕ್ಕೂ ಬಾಹುಬಲಿ-2 ಬಿಡುಗಡೆಗೆ ವಿರೋಧ ಎದುರಾಗಲು ಕಾರಣ ಬೇರಾರು ಅಲ್ಲ ಇದೇ ಚಿತ್ರದ ಪ್ರಮುಖ ಪಾತ್ರಧಾರಿ ಕಟ್ಟಪ್ಪ. ಬಾಹುಬಲಿ-1ರಲ್ಲಿ ಕಟ್ಟಪ್ಪ ಪಾತ್ರದಿಂದ ಮನೆ ಮಾತಾದ ನಟ ಬೇರಾರೂ ಅಲ್ಲ, ಅವರೇ ಸತ್ಯರಾಜ್. ತಮಿಳಿನ ಸತ್ಯರಾಜ್'ಗೆ ಕಟ್ಟಪ್ಪ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು.
ಬಾಹುಬಲಿಗೆ ಕಟ್ಟಪ್ಪನಿಂದ ಕಂಟಕ
ಸೈನಿಕನಾಗಿ ಕಟ್ಟಪ್ಪನ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎನ್ನುವ ಪ್ರಶ್ನೆ ಅಭಿಮಾನಿಗಳ ತಲೆ ಕರೆಯುತ್ತಿತ್ತು. ಬಾಹುಬಲಿ-2ರಲ್ಲಿ ಈ ಚಿದಂಬರ ರಹಸ್ಯ ಬಯಲಾಗುವ ಕಾಲ ಬಂದಿತ್ತು. ಆದರೆ, ಕಟ್ಟಪ್ಪನಿಂದಾಗಿ ಬಾಹುಬಲಿಗೆ ಬಹುದೊಡ್ಡ ಎದುರಾಗಿದೆ.
ಕಟ್ಟಪ್ಪ ಸತ್ಯರಾಜ್ ವಿರುದ್ಧ ತಿರುಗಿಬಿದ್ದ ಕನ್ನಡಿಗರು
ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕಾರಣದಿಂದಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಎಚ್ಚರಿಕೆ ನೀಡಿದೆ. ಕಾವೇರಿ ಹೋರಾಟದ ಸಂದರ್ಭದಲ್ಲಿ ಸತ್ಯರಾಜ್ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆಂಬುದು ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟ್ಟಪ್ಪನಿಗೆ ಕನ್ನಡಿಗರನ್ನು ಕಂಡರೆ ಕೋಪ
ಅದು, 2008, ಏಪ್ರಿಲ್ 5. ಕಾವೇರಿ ನೀರು ಹಂಚಿಕೆ ವಿವಾದ ಕರ್ನಾಟಕ- ತಮಿಳುನಾಡಿನಲ್ಲಿ ತೀವ್ರ ಹೋರಾಟಕ್ಕೆ ಕಾರಣವಾಗಿತ್ತು. ಕರ್ನಾಟಕದ ವಿರುದ್ಧ ಇಡೀ ತಮಿಳು ಚಿತ್ರರಂಗ ಬೀದಿಗಿಳಿದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ಹಾಸನ್ ಪ್ರತಿಭಟನೆ ನೇತೃತ್ವ ವಹಿಸಿದ್ರು. ಈ ವೇದಿಕೆಯಲ್ಲಿ ಸತ್ಯರಾಜ್ ಆಡಿದ ಮಾತು, ಇಡೀ ಕನ್ನಡಿಗರ ಸ್ವಾಭಿಮಾನ ಕೆಣಕುವಂತಿತ್ತು. ಕನ್ನಡಿಗರನ್ನು ಹೀನಾಮಾನವಾಗಿ ನಿಂದಿಸಿದ್ದ ಸತ್ಯರಾಜ್, ತಮಿಳರು ಮತ್ತು ಕನ್ನಡಿಗರ ನಡುವಿನ ಸೌಹಾರ್ದಕ್ಕೆ ಧಕ್ಕೆ ತಂದಿದ್ದರು.
ಸಿನಿಮಾ ಡೈಲಾಗ್ನಂತೆ ಭಾಷಣ ಹೊಡೆದು ಚಪ್ಪಾಳೆ ಗಿಟ್ಟಿಸಿದ್ದ ಸತ್ಯರಾಜ್'ಗೆ ಈಗ ಬುದ್ಧಿಕಲಿಸೋಕ್ಕೆ ಕನ್ನಡಿಗರು ಸಜ್ಜಾಗಿದ್ದಾರೆ. ‘ಸತ್ಯರಾಜ್ ಬಹಿರಂಗವಾಗಿ ಕನ್ನಡಿಗರಿಗೆ ಕ್ಷಮೆ ಕೇಳುವವರೆಗೂ ಬಾಹುಬಲಿ 2 ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡೋದಿಲ್ಲ ಅಂತ ಹೋರಾಟಗಾರರು ಪಟ್ಟುಹಿಡಿದಿದ್ದಾರೆ.
ಒಟ್ನಿನಲ್ಲಿ, ಕನ್ನಡಿಗರನ್ನು ಸುಖಾಸುಮ್ಮನೆ ಕೆಣಕಿ, ಕನ್ನಡಿಗರ ವಿರುದ್ಧ ಅಪಪ್ರಚಾರ ನಡೆಸಿದ್ದ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ಗೆ ಪಾಠ ಕಲಿಸಲು ಕನ್ನಡ ಹೋರಾಟಗಾರರು ಸಜ್ಜಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.