ಸಿಬಿಐ ತನಿಖೆಯನ್ನೂ ದಿಕ್ಕು ತಪ್ಪಿಸುತ್ತದೆಯಾ ಕರ್ನಾಟಕದ ಐಎಎಸ್ ಮಾಫಿಯಾ?

By Suvarna Web DeskFirst Published May 24, 2017, 1:55 PM IST
Highlights

ಅನುರಾಗ್ ತಿವಾರಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೂ ಏನು ಪ್ರಯೋಜನವಾಗದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ, ಸಿಬಿಐ ತನಿಖೆ ಆರಂಭಿಸುವ ಮುನ್ನವೇ ಐಎಎಸ್ ಮಾಫಿಯಾ ಪ್ರಕರಣದ ಸಾಕ್ಷ್ಯಗಳನ್ನು ಗುರುತಿಲ್ಲದಂತೆ ನಾಶ ಮಾಡಿಬಿಡುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು(ಮೇ 24): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಅನುರಾಗ್ ತಿವಾರಿ ಸಾವಿನ ಹಿಂದೆ ಕರ್ನಾಟಕದ ಐಎಎಸ್ ಮಾಫಿಯಾ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಕೂಡ ರಾಜ್ಯದ ಐಎಎಸ್ ಮಾಫಿಯಾದತ್ತ ಬೊಟ್ಟು ಮಾಡಿದ್ದಾರೆ. ಅನುರಾಗ್ ತಿವಾರಿ ಸಾವಿನ ಹಿಂದೆ ಐಎಎಸ್ ಮಾಫಿಯಾದ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿರುವ ಶೋಭಾ ಕರಂದ್ಲಾಜೆ, ಪ್ರಕರಣದಲ್ಲಿ ಸಾಕ್ಷ್ಯನಾಶವಾಗುವ ಅಪಾಯವಿದೆ ಎಂದು ಶಂಕಿಸಿದ್ದಾರೆ.

ಅನುರಾಗ್ ತಿವಾರಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೂ ಏನು ಪ್ರಯೋಜನವಾಗದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ, ಸಿಬಿಐ ತನಿಖೆ ಆರಂಭಿಸುವ ಮುನ್ನವೇ ಐಎಎಸ್ ಮಾಫಿಯಾ ಪ್ರಕರಣದ ಸಾಕ್ಷ್ಯಗಳನ್ನು ಗುರುತಿಲ್ಲದಂತೆ ನಾಶ ಮಾಡಿಬಿಡುತ್ತದೆ ಎಂದು ಹೇಳಿದ್ದಾರೆ.

ವಿಜಯ್'ಕುಮಾರ್ ಪತ್ರ:
ಈ ಆರೋಪವನ್ನು ಪುಷ್ಟೀಕರಿಸಿ ಕರ್ನಾಟಕದ ಐಎಎಸ್ ಅಧಿಕಾರಿ ಎಂಎನ್ ವಿಜಯ್ ಕುಮಾರ್ ಅವರೂ ಕೂಡ ಉ.ಪ್ರ. ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅನುರಾಗ್ ತಿವಾರಿ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಬೇಕೆಂದು ಮನವಿ ಮಾಡಿಕೊಂಡಿರುವ ವಿಜಯ್'ಕುಮಾರ್, ಪ್ರಾಮಾಣಿಕ ಅಧಿಕಾರಿಗಳನ್ನು ಮಟ್ಟಹಾಕುವ ಐಎಎಸ್ ಮಾಫಿಯಾ ಕರ್ನಾಟಕದಲ್ಲಿ ಪ್ರಬಲವಾಗಿದೆ ಎಂದು ತಿಳಿಸಿದ್ದಾರೆ. ಸಿಬಿಐ ಅಧಿಕಾರಿಗಳನ್ನೂ ದಾರಿತಪ್ಪಿಸುವಂಥ ಶಕ್ತಿ ಕರ್ನಾಟಕದ ಐಎಎಸ್ ಮಾಫಿಯಾಗೆ ಇದೆ ಎಂದು ವಿಜಯ್'ಕುಮಾರ್ ಎಚ್ಚರಿಸಿದ್ದಾರೆ.

"ಹಿರಿಯ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ ಮೂರು ಬಾರಿ ನನ್ನ ಕೊಲೆಯತ್ನ ನಡೆದಿತ್ತು. ಅನುರಾಗ್ ತಿವಾರಿ ವಿಚಾರದಲ್ಲೂ ಇಂತಹದ್ದು ನಡೆದಿರಬಹುದು," ಎಂದು ವಿಜಯ್ ಕುಮಾರ್ ಸಂದೇಹಿಸಿದ್ದಾರೆ.

click me!