ಸಿಎಂ ಬದಲಾವಣೆ ಸುದ್ದಿಯ ನಡುವೆ ಎಂ.ಬಿ.ಪಾಟೀಲ್ ಹೆಸರು ಶಿಫಾರಸು!

Published : Jul 02, 2019, 04:47 PM IST
ಸಿಎಂ ಬದಲಾವಣೆ ಸುದ್ದಿಯ ನಡುವೆ ಎಂ.ಬಿ.ಪಾಟೀಲ್ ಹೆಸರು ಶಿಫಾರಸು!

ಸಾರಾಂಶ

ಕೆಲ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ನಾಯಕ, ಗೃಹ ಸಚಿವ ಎಂ.ಬಿ.ಪಾಟೀಲ್ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದು ಸುದ್ದಿಯಾಗಿತ್ತು. ಇದೀಗ ಪಕ್ಕದ ರಾಜ್ಯದ ನಾಯಕರೊಬ್ಬರು ಪಾಟೀಲರ ಪರ ಬ್ಯಾಟ್ ಬೀಸಿದ್ದಾರೆ.

ವಿಜಯಪುರ(ಜೂ. 02)  ಈ ದುರ್ಗಾದೇವಿ ಎಂ.ಬಿ ಪಾಟೀಲರನ್ನು ಮುಖ್ಯಮಂತ್ರಿ ಮಾಡಲೆಂದು ಹಾರೈಸುತ್ತೇನೆ. ಜಿಲ್ಲೆಯಲ್ಲಿ ಎಂ.ಬಿ ಪಾಟೀಲರು ನೀರಾವರಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದವರು.  ಇವರು ಹೆಚ್ಚಿನ ಜನ ಸೇವೆ ಮಾಡಲು ಅವರಿಗೆ ದೇವಿ ಮುಖ್ಯಮಂತ್ರಿ ಮಾಡಲೆಂದು ದೇವಿ ಪ್ರಾರ್ಥಿಸುತ್ತೇನೆ ಎಂದು ಗೋವಾ ಸರ್ಕಾರದ ಉಪ ಸಭಾಪತಿ ಮೈಕಲ್ ಲೋಬೋ ಹೇಳಿದ್ದಾರೆ.

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ  ಮಾತನಾಡಿದ ಗೋವಾ ನಾಯಕ ಎಂ.ಬಿ ಪಾಟೀಲರು ರಾಜಕಾರಣದಲ್ಲಿ ಇನ್ನಷ್ಟು ಶಕ್ತಿ ಪಡೆದುಕೊಳ್ಳಲಿ ಎಂದು ಹಾರೈಸಿದರು.

‘ಸಮನ್ವಯ ಸಮಿತಿಯಲ್ಲಿ ತೀರ್ಮಾನವಾದರೆ ಸಿಎಂ ಬದಲಾವಣೆ’

ಗೃಹ ಸಚಿವ ಎಂ.ಬಿ ಪಾಟೀಲ ಮಾತನಾಡಿ, ಬಂಜಾರ ಸಮಾಜವು ಒಂದು ಶ್ರಮಜೀವಿ. ಇವರು ಬಸವಣ್ಣನವ ಕಾಯಕವನ್ನು ಬಂಜಾರ ಸಮಾಜವು ಪ್ರತಿಪಾದಿಸುತ್ತಿದೆ ಎಂದು ಬಣ್ಣಿಸಿದರು.

ತುಬಚಿ–ಬಬಲೇಶ್ವರ ಏತ ನೀರಾವರಿ ಯೋಜನೆ ಕೇವಲ 15  ದಿನದಲ್ಲಿ ಚಾಲನೆಗೊಳ್ಳಲಿದ್ದು, ಇದ್ದರಿಂದ ಈ ಭಾಗದ ಅನೇಕ ಗ್ರಾಮಗಳಿಗೆ, ತಾಂಡಾಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ವಾಣಿಜ್ಯ ಬೆಳೆ ಬೆಳೆ­ಯಲು ಸಹಕಾರಿಯಾಗಲಿದೆ ಎಂದರು.

ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ಪತ್ರ ಕಳಿಸಿದ ಮಾತ್ರಕ್ಕೆ ರಾಜೀನಾಮೆ ಅಂಗಿಕಾರ ಆಗೋದಿಲ್ಲ. ಖುದ್ದಾಗಿ ಬಂದು ಸ್ಪಿಕರ್ ಬಳಿ ರಾಜೀನಾಮೆ ಪತ್ರ ನೀಡಬೇಕು. ಆಮೇಲೆ ಸ್ಪಿಕರ್ ತನಿಖೆ ಮಾಡಬೇಕಾಗುತ್ತೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು.

ಸೋಮ ವರಹಟ್ಟಿ ಯಲ್ಲಿ  ನಂತರ ಮಾತನಾಡುದ  ಗೃಹ ಸಚಿವ ಪಾಟೀಲ್, ಇನ್ನು 4 ಜನ ರಾಜೀನಾಮೆ ಕುರಿತು ಎಂಬಿ ಪಾಟೀಲರಿಗೆ ಮಾಹಿತಿ ಇದೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ.  ಇಂಟೆಲಿಜೆನ್ಸಿ ನೆಟ್ವರ್ಕ್ ನಮ್ಮದಲ್ಲ. ಅವರು ದೊಡ್ಡವರು, ಮೇಧಾವಿಗಳು. ಅದಕ್ಕಾಗಿ ಅವ್ರನ್ನೇ ಈ ಬಗ್ಗೆ ಕೇಳಿ ಎಂದು ವ್ಯಂಗ್ಯವಾಡಿದರು. ಯಾವ ಕಾಲಕ್ಕೂ ನಮ್ಮ 15  ಜನ ರಾಜೀನಾಮೆ ನೀಡಲ್ಲ ಎಂದು ವಿಶ್ವಾಸದಿಂದಲೇ ಹೇಳಿ ಮುನ್ನಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ ಬೀದಿ ನಾಯಿಗಳಿಗೆ ಪ್ರತಿನಿತ್ಯ 2 ಬಾರಿ ಚಿಕನ್‌ ರೈಸ್‌ !
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!