ತುಮಕೂರಿಗರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

By Web DeskFirst Published Jun 15, 2019, 10:33 AM IST
Highlights

ಕರ್ನಾಟಕ ಸರ್ಕಾರ ತುಮಕೂರಿಗರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಹೇಮಾವತಿ ನೀರು ಹರಿಸಲು ಕಾಲುವೆ ನವೀಕರಣ ಮಾಡಲು  ಒಪ್ಪಿಗೆ ನೀಡಿದೆ

ಬೆಂಗಳೂರು (ಜೂ.15) :  ತುಮಕೂರು ಜಿಲ್ಲೆಗೆ ಹೇಮಾವತಿಯಿಂದ ನೀರು ತರುವ ಕಾಲುವೆ ದುಸ್ಥಿತಿಯಲ್ಲಿರುವುದರಿಂದ ನೀರು ಬರುತ್ತಿಲ್ಲ. ಹೀಗಾಗಿ 0-72 ಕಿ.ಮೀ. ಉದ್ದದ ಕಾಲುವೆಯನ್ನು ನವೀಕರಣಗೊಳಿಸಲು 475 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

ಇದರಡಿ ಮೊದಲ ಹಂತದಲ್ಲಿ 225 ಕೋಟಿ ರು. ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಅಲ್ಲದೆ ಹೇಮಾವತಿ ಕಾಲುವೆಯಿಂದ ಕುಣಿಗಲ್‌ಗೆ ನೀರೊದಗಿಸಲು ಅಗತ್ಯ ಪೈಪ್‌ಲೈನ್‌ ಅಳವಡಿಕೆಗೆ 614 ಕೋಟಿ ರು. ಯೋಜನೆಗೆ ಅನುಮೋದನೆ ನೀಡಲಾಗಿದೆ. 

ಇದರಡಿ 70 ಕಿ.ಮೀ. ಪೈಪ್‌ಲೈನ್‌ ಅಳವಡಿಕೆಯಾಗಲಿದ್ದು, 355 ಕೋಟಿ ರು. ವೆಚ್ಚದಲ್ಲಿ ಮೊದಲ ಹಂತದಲ್ಲಿ 34.5 ಕಿ.ಮೀ. ಉದ್ದದ ಪೈಪ್‌ಲೈನ್‌ ಅಳವಡಿಕೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

click me!