ಸಾಲು-ಸಾಲು ಸರ್ಕಾರಿ ರಜೆಗಳಿಗೆ ಬ್ರೇಕ್‌ ಹಾಕಲು ಮುಂದಾದ ರಾಜ್ಯ ಸರ್ಕಾರ

By Web DeskFirst Published Nov 20, 2018, 1:38 PM IST
Highlights

 ಸಾಲು-ಸಾಲು ರಜೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಯಾಕೆ? ಏನು? ಇಲ್ಲಿದೆ ವಿವರ

ಬೆಂಗಳೂರು, (ನ.20): ಸರ್ಕಾರಿ ರಜೆಗಳಿಗೆ ಬ್ರೇಕ್ ಹಾಕಲು ರಾಜ್ಯ ಮೈತ್ರಿ ಸರ್ಕಾರ ಮುಂದಾಗಿದೆ. ಈ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ.

ಸರ್ಕಾರಿ ರಜೆಗಳು ಹೆಚ್ಚಾಗಿರುವ ಕಾರಣದಿಂದ ಸರ್ಕಾರಿ ಕೆಲಸಗಳು ವೇಗವಾಗಿ ಸಾಗುತ್ತಿಲ್ಲ ಎಂಬ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ರಜೆಗಳಲ್ಲಿ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.

ಮುಂದಿನ ವರ್ಷ ಅಂದ್ರೆ 2019ನೇ ಇಸ್ವಿಯಲ್ಲಿ 54 ವಾರದ ರಜೆಗಳು, 12 2ನೇ ಶನಿವಾರ, 21 ಸಾರ್ವತ್ರಿಕ ರಜೆಗಳು, 19 ಸಾಂದರ್ಭಿಕ ರಜೆಗಳು ಇವೆ. ರಜೆಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ಜನರಿಂದ ಕೇಳಿಬರುತ್ತಿದ್ದು, ರಜೆಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸರ್ಕಾರ ಮುಂದಾಗಿದೆ. 

ಯಾವ ರಜೆಗಳನ್ನು ತೆಗೆದುಹಾಕಬೇಕು, ಯಾವ ರಜೆಗಳನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಚಿವ ಸಂಪುಟ ಉಪಸಮಿತಿಯು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಮಾಹಿತಿ ನೀಡಲಿದೆ. ಬಳಿಕ ಅಧಿಕೃತವಾಗಿ ಸರ್ಕಾರ, ಆ ರಜೆಗಳನ್ನು ಕಡಿತಗೊಳಿಸಲಿದೆ.

ಸರ್ಕಾರದ ಕೆಲಸ ಸರಾಗವಾಗಿ ಸಾಗಲು ರಜೆಗಳಿಗೆ ಕಡಿವಾಣ ಮತ್ತು ಅಧಿಕಾರಿಗಳಿಗೆ ಅನುಕೂಲವಾಗುವಂತೆ ವಾರಾಂತ್ಯದಲ್ಲಿ ರಜೆ ನೀಡುವ ಬಗ್ಗೆಯೂ ಸಂಪುಟ ಉಪಸಮಿತಿ ಪರಿಶೀಲನೆ ನಡೆಸಲಿದೆ. 

click me!