ರಾಜ್ಯ ಸರಕಾರಕ್ಕೆ ತಪ್ಪಿದ ಬಹುದೊಡ್ಡ ಕಂಟಕ

By Web DeskFirst Published Jul 25, 2018, 3:54 PM IST
Highlights

ಸಾಕಷ್ಟು ಸುರಿದಿರುವ ಮಳೆ ಈ ಸಾರಿ ಕಾವೇರಿ ಕೊಳ್ಳದ ರೈತರು ಮತ್ತು ಸರಕಾರದ ತಲೆ ಬಿಸಿ ಕಡಿಮೆ ಮಾಡಿದೆ. ಕಾವೇರಿ ಕೊಳ್ಳದ ಎಲ್ಲ ಜಲಾಶಯಗಳು ಭರ್ತಿಯಾಗಿವೆ.

ಬೆಂಗಳೂರು[ಜು.25]   ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಟೆನ್ಷನ್ ಕಡಿಮೆಯಾಗಿದೆ. ಜುಲೈ ತಿಂಗಳಿನಲ್ಲೇ ದಾಖಲೆ ಪ್ರಮಾಣದ ನೀರು ತಮಿಳುನಾಡಿಗೆ ಹರಿದಿದೆ. ಇಲ್ಲಿಯತನಕ ಬರೋಬ್ಬರಿ 101 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.

ಜೂನ್, ಜುಲೈ ತಿಂಗಳಲ್ಲಿ ರಾಜ್ಯ ನೀಡಬೇಕಿದ್ದ 41 ಟಿಎಂಸಿ ಮತ್ತು ಆಗಸ್ಟ್ ಗೆ ಬಿಡಬೇಕಾಗಿದ್ದ 46 ಟಿಎಂಸಿ ನೀರನ್ನು ಈಗಾಗಲೆ ತಮಿಳುನಾಡಿಗೆ ಬಿಡಲಾಗಿದೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡಬೇಕಾಗಿದ್ದ 36 ಟಿಎಂಸಿ ಲೆಕ್ಕದಲ್ಲಿ  ಈಗಾಗಲೇ 16 ಟಿಎಂಸಿ ತಮಿಳುನಾಡಿಗೆ ಹರಿದಿದೆ.ಇನ್ನು ನಾಲ್ಕು ದಿನದಲ್ಲೇ ಸೆಪ್ಟೆಂಬರ್ ತಿಂಗಳ ನೀರನ್ನೂ ತಮಿಳುನಾಡಿಗೆ ಹರಿಯಲಿದೆ. 

 ಕಾವೇರಿ ನ್ಯಾಯಾಧೀಕರಣ, ಕೇಂದ್ರದ ಈ ನಿರ್ಧಾರ ರಾಜ್ಯಕ್ಕೆ ಮರಣ ಶಾಸನ

ಪ್ರತಿನಿತ್ಯ 75000 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದೆ. ಇನ್ನೊಂದು ಕಡೆ  ಕಾವೇರಿ ನೀರು ಹರಿವಿನಿಂದ ತಮಿಳುನಾಡು ರೈತರು ಕಂಗಾಲಾಗಿದ್ದಾರೆ. ಐದು ವರ್ಷದ ನಂತರ ಮೆಟ್ಟೂರು ಡ್ಯಾಂ ಭರ್ತಿಯಾಗಿದೆ.

click me!