
ಬೆಂಗಳೂರು[ಜು. 19] ವಿಶ್ವಾಸ ಮತ ಪ್ರಕ್ರಿಯೆ ’ಮಂಡೆ’ ಬಿಸಿಯಾಗಿದೆ. ಶುಕ್ರವಾರವೂ ವಿಶ್ವಾಸಮತ ಸಾಬೀತು ಮಾಡುವ ಪ್ರಕ್ರಿಯೆ ನಡೆಯಲಿಲ್ಲ. ವಿಶ್ವಾಸಮತದ ಮೇಲಿನ ಚರ್ಚೆ ಪೂರ್ಣಗೊಳ್ಳದ ಕಾರಣ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಸೋಮವಾರಕ್ಕೆ ಮುಂದೂಡಿದರು.
ಎಚ್.ಡಿ.ಕುಮಾರಸ್ವಾಮಿ ಸಿಎಂ ಕುರ್ಚಿಗೆ ಅಂಟಿಕೊಂಡಿರುವುದನ್ನು ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಕೆ. ಎಸ್. ಈಶ್ವರಪ್ಪ ಅವರು ಟ್ವೀಟ್ ಮೂಲಕ ಮುಖ್ಯಮಂತ್ರಿಗಳ ಕಾಲೆಳೆದಿದ್ದಾರೆ. "ಫೆವಿಕಾಲ್ ಕಂಪನಿಯವರು ಬ್ರಾಂಡ್ ಅಂಬಾಸಿಡರ್ ಹುಡುಕಾಟದಲ್ಲಿ ಇದ್ದಾಗ ಆಪದ್ಭಾಂಧವರಾಗಿ ಸಿಕ್ಕಿದ್ದು ನಮ್ಮ ಮುಖ್ಯಮಂತ್ರಿಗಳು" ಎಂದು ವ್ಯಂಗ್ಯದ ಏಟು ನೀಡಿದ್ದಾರೆ.
ಸೋಮವಾರಕ್ಕೆ ಸದನ, ಎಲ್ಲರಿಗೂ ‘ಮಂಡೆ ಬಿಸಿ’
ಶುಕ್ರವಾರ ಕಲಾಪವನ್ನು ಮುಂದೂಡುವ ಮುನ್ನ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆಯನ್ನು ಕೇಳಿದರು. ಕೆ. ಎಸ್. ಈಶ್ವರಪ್ಪ ಈ ಕುರಿತು ಟ್ವೀಟ್ ಮಾಡಿದ್ದು, ‘ಮಾಜಿ ಮುಖ್ಯಮಂತ್ರಿಗಳನ್ನು ಕೇಳಿ ಸ್ಪೀಕರ್ ಸೋಮವಾರಕ್ಕೆ ಸದನ ಮುಂದೂಡಿದ್ದು ‘ನರಿಯ ನ್ಯಾಯ’ ಕೇಳಿದ ಹಾಗಾಯಿತು’ ಎಂಬ ಹಳೆಯ ಗಾದೆ ಮಾತನ್ನು ಪ್ರಯೋಗ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.