
ಟಿ.ನರಸೀಪುರ[ಆ.12]: ಹಳೇ ತಿರುಮಕೂಡಲಿನ ಮೈಸೂರು ರಸ್ತೆಯವರೆಗೂ ಕಪಿಲಾ ನದಿಯ ಪ್ರವಾಹ ವ್ಯಾಪಿಸಿದ್ದರಿಂದ ಶ್ರೀನಿವಾಸ ಕನ್ವೆನ್ಷನ್ ಹಾಲ್ ನೀರಿನಲ್ಲಿ ಮುಳುಗಿದ್ದರಿಂದ ಮದುವೆ ಮತ್ತೊಂದು ಕಲ್ಯಾಣ ಮಂಟಪಕ್ಕೆ ಸ್ಥಳಾಂತರಗೊಂಡಿತು.
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ಚಾಮರಾಜನಗರದ ರಾಮಸಮುದ್ರದ ವರನಿಗೂ ಹಾಗೂ ತಾಲೂಕಿನ ದೊಡ್ಡಪುರ ಗ್ರಾಮದ ವಧುವಿಗೂ ವಿವಾಹ ನಿಶ್ಚಯವಾಗಿತ್ತು. ರಾತ್ರಿಯಿಡೀ ಕಲ್ಯಾಣ ಮಂಟಪದಲ್ಲಿಯೇ ವಧು-ವರರು ಇದ್ದರಾದರೂ ಬೆಳಗಾಗುವ ಹೊತ್ತಿಗೆ ಕಲ್ಯಾಣ ಮಂಟಪಕ್ಕೆ ಪ್ರವಾಹ ಅತಿಥಿಯಂತೆ ಆಗಮಿಸಿದ್ದರಿಂದ ಬೆಚ್ಚಿದ ಹೆಣ್ಣು-ಗಂಡಿನ ಕಡೆಯವರಿಬ್ಬರೂ ಎಚ್ಚೆತ್ತುಕೊಂಡು ಜೋಡಿ ರಸ್ತೆಯಲ್ಲಿರುವ ಶ್ರೀ ಮಹದೇಶ್ವರ ಕಲ್ಯಾಣ ಮಂಟಪಕ್ಕೆ ವಿವಾಹವನ್ನೇ ಸ್ಥಳಾಂತರಿಸಿದರು.
ಮಧ್ಯಾಹ್ನ ವೇಳೆಗೆ ಶ್ರೀನಿವಾಸ ಕನ್ವೆನ್ಷನ್ ಹಾಲ್ ನೆರೆ ನೀರಿನಿಂದ ಆವೃತವಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.