ಪ್ರವಾಹದಲ್ಲಿ ಕಾಣೆಯಾದವರ ಪತ್ತೆಗೆ ಏರ್‌ಟೆಲ್ ನೆರವು, ನಾವೇನು ಮಾಡ್ಬೇಕು?

By Web DeskFirst Published Aug 11, 2019, 7:20 PM IST
Highlights

ಲಕ್ಷಾಂತರ ಜನ ಕರ್ನಾಟಕದ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದಾರೆ. ಅದೆಷ್ಟೋ ಸಾವಿರ ಜನ ನಾಪತ್ತೆಯಾಗಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು, ಮಾಧ್ಯಮಗಳು ಪರಿಹಾರ ಕಾರ್ಯಕ್ಕೆ ಸರಕಾರದೊಂದಿಗೆ ಕೈ ಜೋಡಿಸಿವೆ. ಇದೀಗ ಏರ್ ಟೆಲ್ ಸಹ ತನ್ನದೇ ರೀತಿಯಲ್ಲಿ ನೆರವು ನೀಡಲು ಮುಂದಾಗಿದೆ.

ಬೆಂಗಳೂರು[ಆ. 11] ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದವರ ಪತ್ತೆಗೆ ಏರ್‌ ಟೆಲ್ ನೆರವು ಮುಂದಾಗಿದೆ, 1948 ಟೋಲ್ ಫ್ರೀ ಸಂಖ್ಯೆಗೆ  ಕರೆ ಮಾಡಿದರೆ ಸಂಸ್ಥೆ ನಿಮ್ಮ ನೆರವಿಗೆ ನಿಲ್ಲುತ್ತದೆ.  ಹಾಗಾದರೆ ಯಾವೆಲ್ಲ ಸ್ಟೆಪ್ ಗಳನ್ನು ಫಾಲೋ ಮಾಡಬೇಕು?

ಹಂತ 1: ನಿಮ್ಮ ಏರ್ ಟೆಲ್ ನಂಬರ್ ನಿಂದ ಕರೆಮಾಡಬೇಕು. ಏರ್ ಟೆಲ್ ಸಂಖ್ಯೆ ಇಲ್ಲವಾದರೆ 9108445678ಗೆ ಕರೆ ಮಾಡಬೇಕು.

ಹಂತ 2: ಕಳೆದು ಹೋದ ವ್ಯಕ್ತಿಯ ಏರ್ ಟೆಲ್  ಸಂಖ್ಯೆಯನ್ನು ತಿಳಿಸಬೇಕು

ಹಂತ 3: ಮೂರು ಗಂಟೆ ಒಳಗೆ ನಿಮ್ಮ ಮೊಬೈಲ್ ಗೆ ಸಂದೇಶ ಒಂದು ಬರಲಿದ್ದು ಮಿಸ್ ಆದ ವ್ಯಕ್ತಿಯ ಕೊನೆಯ ಲೋಕೇಶನ್ ಅನ್ನು ಸಂಸ್ಥೆ ಕಳುಹಿಸಿ ಕೊಡಲಿದೆ.

click me!