ಕರ್ನಾಟಕದ ಎಲ್ಲ ಹೆದ್ದಾರಿಗಳು ಜೂ. 10 ಸೋಮವಾರ ಬಂದ್

By Web Desk  |  First Published Jun 9, 2019, 6:35 PM IST

ದೋಸ್ತಿ ಸರಕಾರ ಭೂ ಸ್ವಾಧೀನ ಕಾಯಿದೆ ತಿದ್ದುಪಡಿಗೆ ಮುಂದಾಗಿರುವುದನ್ನು ಖಂಡಿಸಿ ರೈತ ಸಂಘಟನೆಗಳು ಹೆದ್ದಾರಿ ಬಂದ್ ಗೆ ಕರೆ ನೀಡಿವೆ.


ಬೆಂಗಳೂರು[ ಜೂ. 09] ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ಸೋಮವಾರ [ಜೂ. 10] ರಂದು ಬಂದ್ ಆಗಲಿವೆ. ರಾಜ್ಯದ ಪ್ರಮುಖ ಹೆದ್ದಾರಿಗಳಿಗೂ ಬಂದ್ ಬಿಸಿ ತಟ್ಟಲಿದೆ.

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ರಸ್ತೆಗೆ ಇಳಿಯಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್​ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 8 ಕಡೆ ರೈತರು ರಸ್ತೆ ತಡೆ ನಡೆಸಲಿದ್ದಾರೆ.

Latest Videos

undefined

ಗದ್ದೆಗಿಳಿದು ಉಳಿಮೆ ಮಾಡಿದ ಬಳ್ಳಾರಿ ಸಂಸದ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಿಂದ ಹೆದ್ದಾರಿ ಬಂದ್ ಗೆ ಕರೆ ನೀಡಿದೆ. ಬೆಂಗಳೂರಿನ‌ ನಾಲ್ಕೂ ಭಾಗಗಲ್ಲೂ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಬೆಂಗಳೂರು-ಪೂನಾ ಮಾರ್ಗ, ಬೆಂಗಳೂರು-ಬಳ್ಳಾರಿ ರಸ್ತೆ, ಬೆಂಗಳೂರು‌-ಮೈಸೂರು ಹೆದ್ದಾರಿ, ಸರ್ಜಾಪುರ ರಸ್ತೆಯಲ್ಲಿ ಹೆದ್ದಾರಿ ಬಂದ್ ಮಾಡಲಿದ್ದೇವೆ ಎಂದು ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್  ತಿಳಿಸಿದ್ದಾರೆ.

ಇದಲ್ಲದೆ ತುಮಕೂರು, ಕೋಲಾರ, ಆನೆಕಲ್, ಚಿತ್ರದುರ್ಗ ಮತ್ತು ಹಾವೇರಿಯ ವಿವಿವಿಧ ಕಡೆ ಹೆದ್ದಾರಿ ಬಂದ್ ಮಾಡಲಾಗುತ್ತದೆ. ರಾಜ್ಯ ಸರಕಾರ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿದ್ದು  ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬಂದ್ ಮಾಡಲಾಗುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನರೈತರು ಹೆದ್ದಾರಿ ಬಂದ್ ಮಾಡಲಿದ್ದಾರೆ.

click me!