ಆಯೋಗದಿಂದ ಪ್ರಕಟಿಸುವ ಮೊದಲು ಚುನಾವಣಾ ದಿನಾಂಕ ಲೀಕ್

By Suvarna Web DeskFirst Published Mar 27, 2018, 1:27 PM IST
Highlights

ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ದೊಡ್ಡ  ಕಾಂಟ್ರವರ್ಸಿ ಎದುರಾಗಿದೆ.  

ನವದೆಹಲಿ : ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ದೊಡ್ಡ  ಕಾಂಟ್ರವರ್ಸಿ ಎದುರಾಗಿದೆ.  ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನ ಬಿಜೆಪಿ ಐಟಿ ಸೆಲ್ ಮುಖಂಡರಾದ ಅಮಿತ್ ಮಾಳವಿಯಾ ಅವರು ಚುನಾವಣಾ ದಿನಾಂಕವನ್ನು ಟ್ವೀಟ್ ಮಾಡಿದ್ದರು, ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಚುನಾವಣಾ ಆಯೋಗ ದಿನಾಂಕ ಪ್ರಕಟ ಮಾಡುವ ಮುನ್ನ ಬಿಜೆಪಿ ಐಟಿ ಸೆಲ್ ಮುಖಂಡರಿಗೆ  ಹೇಗೆ ದಿನಾಂಕದ ಬಗ್ಗೆ ಮಾಹಿತಿ ದೊರಕಿತು ಎಂದು ಎಲ್ಲೆಡೆ ಪ್ರಶ್ನೆಗಳು ಎದ್ದಿವೆ.

 ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ  ಪತ್ರಕರ್ತರು ಪ್ರಶ್ನೆ ಮಾಡಿದ್ದಕ್ಕೆ ಉತ್ತರಿಸಿದ ಕೇಂದ್ರ ಚುನಾವಣಾ ಆಯುಕ್ತ  ಪ್ರಕಾಶ್ ರಾವತ್ ಈ ಬಗ್ಗೆ ಸೂಕ್ತ ತನಿಖೆಯನ್ನ  ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕಾನೂನಾತ್ಮಕವಾಗಿ ಸೂಕ್ತ ಕ್ರಮ  ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೆಲವೊಂದು ವಿಚಾರಗಳು ಲೀಕ್ ಆಗುತ್ತವೆ. ಆದರೆ ಚುನಾವಣಾ ಆಯೋಗ ಕ್ರಮ ಜರುಗಿಸುತ್ತದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಮೇ 12ರಂದು ಚುನಾವಣೆ ನಡೆಯುತ್ತಿದ್ದು, ಮೇ 15ರಂದು ಚುನಾವಣಾ ದಿನಾಂಕ ಪ್ರಕಟವಾಗುತ್ತಿದೆ. ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡುವ ಮೊದಲು ಬಿಜೆಪಿ ಐಟಿ ಸೆಲ್ ಮುಖಂಡ ಅಮಿತ್ ಮಾಳವಿಯಾ ಅವರು  ಈ ಬಗ್ಗಟ ಟ್ವೀಟ್ ಮಾಡಿದ್ದರು.

click me!