
ಬೆಂಗಳೂರು(ಮಾ.15): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗಿಷ್ಟ ಬಂದ ದರ ವಿಧಿಸುತ್ತಿದ್ದ ಮಲ್ಟಿಫೆಕ್ಸ್'ಗಳಿಗೆ ಕಡಿವಾಣ ಹಾಕಿದ್ದಾರೆ.
ಇನ್ನು ಮುಂದೆ ರಾಜ್ಯದ ಮಲ್ಟಿಫ್ಲೆಕ್ಸ್'ಗಳು, ಚಿತ್ರಮಂದಿರಗಳು ಸೇರಿದಂತೆ ಯಾವುದೇ ಸಿನಿಮಾ ಮಂದಿರಗಳು ಟಿಕೆಟ್ ದರವನ್ನು 200ರೂ.ಗಳಿಗಿಂತ ಹೆಚ್ಚು ವಿಧಿಸುವಂತಿಲ್ಲ. ಯಾವುದೇ ಭಾಷೆಯ ಚಿತ್ರವಿರಲಿ, ಯಾವುದೇ ಸಮಯವಿರಲಿ ಗರಿಷ್ಠ 200 ರೂ.ಗಳನ್ನು ಮಾತ್ರ ಗ್ರಾಹಕರಿಂದ ಶುಲ್ಕವಾಗಿ ಸ್ವೀಕರಿಸಬೇಕು ಎಂದು ಬಜೆಟ್'ನಲ್ಲಿ ತಿಳಿಸಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರ ಏಕರೀತಿಯ ಪ್ರವೇಶ ದರ ನೀತಿ ಜಾರಿಗೊಳಿಸಿದೆ. ಅಲ್ಲದೆ ಮಲ್ಟಿ ಫ್ಲೆಕ್ಸ್ಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶನ ಕಡ್ಡಾಯಗೊಳಿಸಿದೆ. ಮಧ್ಯಾಹ್ನ 1.30, ಸಂಜೆ 7.30ರವರೆಗೆ ಪ್ರದರ್ಶನ ಕಡ್ಡಾಯವಾಗಿರಬೇಕು. ಚಿತ್ರರಂಗಕ್ಕೆ ಅನುಕೂಲ ಕಲ್ಪಿಸಿರುವ ರಾಜ್ಯ ಸರ್ಕಾರ ಚಲನಚಿತ್ರ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಆರೋಗ್ಯ ಸೇವೆ ನಿಧಿಯನ್ನು ಹೆಚ್ಚಿಸಿದೆ.ದತ್ತಿನಿಧಿಯನ್ನು 1 ಕೋಟಿಯಿಂದ 10 ಕೋಟಿ ರೂ.ಗೆ ಹೆಚ್ಚಿಸಿರುವುದಾಗಿ ಬಜೆಟ್'ನಲ್ಲಿ ಘೋಷಿಸಿದ್ದಾರೆ.
ಅಲ್ಲದೆ ಕನ್ನಡ ಚಿತ್ರಗಳ ಸಹಾಯಧನವನ್ನು 75 ಚಿತ್ರಗಳಿಂದ 125 ಚಿತ್ರಗಳಿಗೆ ಹೆಚ್ಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.