
ಮುಂಬೈ[ಜು.12]: ರಾಜ್ಯ ರಾಜಕೀಯ ಪ್ರಹಸನ ಸುಪ್ರೀಂ ಕೋರ್ಟ್ ಅಂಗಳ ತಲುಪಿದ್ದು, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದು, ಇಂದು ಮಹತ್ವದ ಆದೇಶ ಹೊರ ಬಿದ್ದಿದೆ. ಈ ಆದೇಶದಿಂದ ಅತೃಪ್ತ ಶಾಸಕರಿಗೆ ಕೊಂಚ ರಿಲೀಫ್ ಸಿಕ್ಕರೂ, ವಿಪ್ ಉಲ್ಲಂಘನೆಯಿಂದ ಅನರ್ಹಗೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಸುಪ್ರೀಂ ಆದೇಶ ಹೊರ ಬಿದ್ದ ಬೆನ್ನಲ್ಲೇ ನಾಲ್ಕು ರೆಬೆಲ್ ನಾಯಕರು ಹೋಟೆಲ್ ನಿಂದ ಹೊರಬಂದು ಸಿದ್ಧಿ ವಿನಾಯಕನ ಮೊರೆ ಹೋಗಿದ್ದಾರೆ.
ಹೌದು ಸುಪ್ರಿಂ ಆದೇಶದಿಂದ ಸರ್ಕಾರ ಕೊಂಚ ನಿಟ್ಟುಸಿರು ಬಿಟ್ಟಿದೆ. ಆದೇಶ ಹೊರ ಬೀಳುತ್ತಿದ್ದಂತೆಯೇ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ. ಸದ್ಯ ಇದು ರೆಬೆಲ್ಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಕಳೆದೊಂದು ವಾರದಿಂದ ಮುಂಬೈ ಹೋಟೆಲ್ ನಲ್ಲಿ ಕುಳಿತಿದ್ದ ರೆಬೆಲ್ ನಾಯಕರನ್ನು ಇದು ಆತಂಕಕ್ಕೀಡು ಮಾಡಿದೆ. ಸದ್ಯ ಸರ್ಕಾರದ ಈ ದಾಳದ ಬೆನ್ನಲ್ಲೇ ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್ ಹಾಗೂ ಎಸ್. ಟಿ. ಸೋಮಶೇಖರ್ ಮುಂಬೈನ ಪ್ರಖ್ಯಾತ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅತ್ಯಂತ ಫೇಮಸ್ ಮುಂಬೈನ ಸಿಧ್ಧಿ ವಿನಾಯಕ ದೇವಸ್ಥಾನ
ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರೆ ಎಲ್ಲಾ ವಿಘ್ನಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಘಿ ಇಲ್ಲಿ ಸಾವಿರಾರು ಭಕ್ತರು ಆಗಮಿಸಿ ಪೂಜೆ ಮಾಡುತ್ತಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಗಣ್ಯರು ಇಲ್ಲಿಗೆ ಭೇಟಿ ನೀಡುತ್ತಾರೆ ತಮ್ಮ ಮೇಲಿನ ವಿಘ್ನ ನಿವಾರಿಸುವಂತೆ ಗಣೇಶನ ಪ್ರಾರ್ಥಿಸುತ್ತಾರೆ. ಸದ್ಯ ರೆಬೆಲ್ ನಾಯಕರೂ ಇಲ್ಲಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ
ಕಳೆದೊಂದು ವಾರದಿಂದ ನಡೆಯುತ್ತಿರುವ ರಾಜಕೀಯ ಪ್ರಹಸನ ಮುಂದೆ ಯಾವ ತಿರುವುದು ಪಡೆದುಕೊಳ್ಳಲಿದೆ ಎಂಬುವುದು ಸದ್ಯ ಊಹಿಸುವುದೂ ಕಷ್ಟವಾಗಿದೆ. ಈ ರಾಜಕೀಯ ಸಮರದಲ್ಲಿ ಅತೃಪ್ತರು ಗೆಲ್ಲುತ್ತಾರಾ? ಅಥವಾ ದೋಸ್ತಿಗಳಿಗೆ ಜಯವಾಗುತ್ತಾ? ಕಾದು ನೊಡಬೇಕಷ್ಟೇ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.