
ಬೆಂಗಳೂರು : ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ವಂಚಿತರ ಅತೃಪ್ತಿ ತಾರಕ ಮುಟ್ಟಿದ್ದು, ಅತೃಪ್ತರ ತಲೆಯಾಳು ಎಂ.ಬಿ. ಪಾಟೀಲ್ ನಿವಾಸ ಹೈಡ್ರಾಮಾದ ಕೇಂದ್ರ ಸ್ಥಳವಾಗಿತ್ತು.
ಕಾಂಗ್ರೆಸ್ ಶಾಸಕರ ಈ ಅತೃಪ್ತಿ ವಿಕೋಪ ಮುಟ್ಟಿ, ಮೈತ್ರಿಕೂಟದ ಅಸ್ತಿತ್ವಕ್ಕೆ ಕಂಟಕ ತರುವ ಲಕ್ಷಣ ಕಂಡ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಖಾಡಕ್ಕಿಳಿದು ಸಮಾಧಾನಪಡಿಸಲು ನಡೆಸಿದ ಪ್ರಯತ್ನಗಳು ವಿಫಲವಾದವು.
ಎಂ.ಬಿ. ಪಾಟೀಲ್ ಬಣ ಹಾಗೂ ಎಚ್.ಕೆ. ಪಾಟೀಲ್ ಬಣ ನಗರದಲ್ಲಿ ತಮ್ಮ ಬಂಡಾಯ ಜ್ವಾಲೆ ತೀವ್ರಗೊಳಿಸಿದ್ದರು. ಒಂದು ಹಂತದಲ್ಲಿ ಎಂ.ಬಿ. ಪಾಟೀಲ್ ಅತೃಪ್ತ ಶಾಸಕರನ್ನು ಒಗ್ಗೂಡಿಸುತ್ತಿದ್ದರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಆತಂಕಕ್ಕೆ ಒಳಗಾದರು.
20ರೊಳಗೆ ಮತ್ತೆ ಸಂಪುಟ ವಿಸ್ತರಣೆ
ಬೆಂಗಳೂರು: ಬಂಡಾಯ ಶಮನಕ್ಕಾಗಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಎಂ.ಬಿ.ಪಾಟೀಲ್‌ಗೆ ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಬುಲಾವ್ ನೀಡಿದೆ. ಅತೃಪ್ತಿ ಶಮನಕ್ಕಾಗಿ ಜೂ.15 ರಿಂದ 20ರೊಳಗೆ 2ನೇ ಹಂತದ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.