ಸೈಲಂಟಾಗೇ ಎಂಬಿ ಪಾಟೀಲ್ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದು ಹೀಗೆ!

By Web DeskFirst Published Dec 22, 2018, 10:43 PM IST
Highlights

ಅಂತೂ ಇಂತು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ.  ವಿಸ್ತರಣೆಯೋ..ಪುನಾರಚನೆಯೋ ಹೇಗೆ ಬೇಕಾದರೂ ಕರೆದುಕೊಳ್ಳಬಹುದು. ಹಿಂದಿನ ಸರಕಾರದಲ್ಲಿ ಅಂತ್ಯದವರೆಗೂ ಪ್ರಭಾವಿ ಸಚಿವ ಎಂದು ಕರೆಸಿಕೊಂಡಿದ್ದ ಎಂಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಹಾಗಾದರೆ ಎಂಬಿ ಪಾಟೀಲ್ ಮಸಚಿವ ಸ್ಥಾನ ಹೇಗೆ ಪಡೆದುಕೊಂಡರು? ಅಸಲಿ ಕತೆ ಇಲ್ಲಿದೆ..

ಬೆಂಗಳೂರು[ಡಿ.22] ಸರಕಾರ ರಚನೆಯಾದಾಗ ಎಂಬಿ ಪಾಟೀಲರಿಗೆ ಸಚಿವ ಸ್ಥಾನ ದೊರೆತಿರಲಿಲ್ಲ. ಸಹಜವಾಗಿಯೇ ನೊಂದುಕೊಂಡಿದ್ದ ಎಂಬಿ ಪಾಟೀಲರನ್ನು ಸಿದ್ದರಾಮಯ್ಯ ಆದಿಯಾಗಿ ನಾಯಕರು ಸಮಾಧಾನ ಪಡಿಸಿದ್ಸದುರು. ಒಮ್ಮೆ ಪಾಟೀಲರು ಕಾಂಗ್ರೆಸ್ ತೊರೆಯಲಿದ್ದಾರೆ ಎಂದು ಹೇಳಲಾಗಿತ್ತು.

ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಇಲ್ಲ: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಂಬಿ ಪಾಟೀಲರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದ್ದರೂ ಕೊನೆ ಕ್ಷಣದಲ್ಲಿ ಯುವ ಮುಖ ಎಂಬ ಆಧಾರದಲ್ಲಿ ದಿನೇಶ್ ಗುಂಡೂರಾವ್‌ ಆಯ್ಕೆಯಾಗಿದ್ದರು. ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ ಎಂಬ ಕೂಗು ಜೋರಾಗಿಯೇ ಎದ್ದಿತ್ತು.

ಅಂದು ಬೇಕಾದವರು ಇಂದು ಬೇಡಾದರು..ಯೂಸ್ ಆ್ಯಂಡ್‌ ಥ್ರೋ ಪಾಲಿಟಿಕ್ಸ್!

ಲಿಂಗಾಯತ ಧರ್ಮ ವಿಚಾರ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದಿದ್ದು ಇದೇ ಪಾಟೀಲರು. ಆದರೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಏಟು ನೀಡಿತ್ತು. ಪಾಟೀಲರಿಗೆ ಇಲ್ಲಿಯೂ ಹಿನ್ನಡೆ ಆಗಿತ್ತು.

ಸೈಲೆಂಟಾಗಿದ್ದೇ ಸಚಿವ ಸ್ಥಾನ ಗಿಟ್ಟಿಸಿಕೊಂಡ್ರು: ಸಚಿವ ಸ್ಥಾನಕ್ಕಾಗಿ ಬಿಸಿ ಪಾಟೀಲ್ ಸೇರಿದಂತೆ ಹಲವರು ಕಾಂಗ್ರೆಸ್‌ನಲ್ಲಿ ಅಪಸ್ವರ ಎತ್ತಿದ್ದರೆ ಎಂಬಿ ಪಾಟೀಲ್ ಮಾತ್ರ ಸುಮ್ಮನೆ ಇದ್ದರು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂಬ ಮಾತನ್ನು ಮಾತ್ರ ಹೇಳುತ್ತಿದ್ದರು. ಅಂತಿಮವಾಗಿ ಇಂದು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡರು. ಲಿಂಗಾಯತ ಕೋಟಾ ಸಹ ಪಾಟೀಲರ ನೆರವಿಗೆ ಬಂತು.


 

click me!