ಬಿ. ಎಸ್ ಯಡಿಯೂರಪ್ಪ ಸಂಪುಟಕ್ಕೆ 17 ಸಚಿವರು ಸೇರ್ಪಡೆ| ಅಳೆದು, ತೂಗಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಯಾರಿಗೆಲ್ಲ ಮಂತ್ರಿ ಪಟ್ಟ| ರಾಜಭವನದಲ್ಲಿ ಅದ್ಧೂರಿ ಪ್ರಮಾಣವಚನ ಕಾರ್ಯಕ್ರಮ!
ಬೆಂಗಳೂರು[ಆ.20]: ಬಿ. ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳ ಬಳಿಕ ಕೊನೆಗೂ ಸಂಪುಟ ವಿಸ್ತರಣೆಯಾಗಿದೆ. 17 ಮಂದಿ ಶಾಸಕರು ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಳೆದು, ತೂಗಿ ಸಿದ್ಧಪಡಿಸಿರುವ ಈ ಪಟ್ಟಿಯಲ್ಲಿ ಅಚ್ಚರಿಯ ಹೆಸರುಗಳು ಕಂಡು ಬಂದಿವೆ. ಕೊನೆಯ ಕ್ಷಣದವರೆಗೆ ಸಚಿವರು ಯಾರಾಗ್ತಾರೆ? ಎಂಬುವುದಕ್ಕೆ ಉತ್ತರ ಬಹಳಷ್ಟು ರಹಸ್ಯವಾಗಿತ್ತು. ಆದರೀಗ ಈ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದ್ದು, ಸಚಿವರು ರಾಜಭವನದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕರ್ನಾಟಕ ಸಚಿವ ಸಂಪುಟಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
*ಗೋವಿಂದ ಕಾರಜೋಳ - ಮುಧೋಳ - ದಲಿತ ಎಡ
*ಡಾ.ಸಿ.ಎನ್.ಅಶ್ವತ್ಥ್ ನಾರಾಯಣ - ಮಲ್ಲೇಶ್ವರಂ - ಒಕ್ಕಲಿಗ
*ಲಕ್ಷ್ಮಣ್ ಸವದಿ - ಲಿಂಗಾಯತ
*ಕೆ.ಎಸ್.ಈಶ್ವರಪ್ಪ - ಶಿವಮೊಗ್ಗ ನಗರ - ಕುರುಬ
*ಆರ್.ಅಶೋಕ್ - ಪದ್ಮನಾಭನಗರ - ಒಕ್ಕಲಿಗ
*ಜಗದೀಶ್ ಶೆಟ್ಟರ್ - ಹುಬ್ಬಳ್ಳಿ-ಧಾರವಾಡ ಕೇಂದ್ರ - ಲಿಂಗಾಯತ
*ಬಿ.ಶ್ರೀರಾಮುಲು - ಮೊಳಕಾಲ್ಮೂರು - ವಾಲ್ಮೀಕಿ
*ಎಸ್.ಸುರೇಶ್ ಕುಮಾರ್ - ರಾಜಾಜಿನಗರ - ಬ್ರಾಹ್ಮಣ
*ವಿ.ಸೋಮಣ್ಣ - ಗೋವಿಂದರಾಜನಗರ - ಲಿಂಗಾಯತ
*ಸಿ.ಟಿ.ರವಿ - ಚಿಕ್ಕಮಗಳೂರು - ಒಕ್ಕಲಿಗ
*ಬಸವರಾಜ್ ಬೊಮ್ಮಾಯಿ - ಶಿಗ್ಗಾಂವಿ - ಲಿಂಗಾಯತ
*ಕೋಟ ಶ್ರೀನಿವಾಸ್ ಪೂಜಾರಿ - ಎಂಎಲ್ ಸಿ - ಈಡಿಗ
*ಜೆ.ಸಿ.ಮಾಧುಸ್ವಾಮಿ - ಚಿಕ್ಕನಾಯಕನಹಳ್ಳಿ - ಲಿಂಗಾಯತ
*ಸಿ.ಸಿ.ಪಾಟೀಲ್ - ನರಗುಂದ - ಲಿಂಗಾಯತ
*ಎಚ್.ನಾಗೇಶ್ - ಮುಳಬಾಗಿಲು - ದಲಿತ ಎಡ
*ಪ್ರಭು ಚೌಹಾಣ್ - ಔರಾದ್ - ಲಂಬಾಣಿ
*ಶಶಿಕಲಾ ಜೊಲ್ಲೆ - ನಿಪ್ಪಾಣಿ - ಪಂಚಮಸಾಲಿ ಲಿಂಗಾಯತ
Congratulations to the newly inducted cabinet ministers. Together, let us work towards unveiling a new era of development, growth and prosperity in line with the aspirations of the people of Karnataka and the vision of PM pic.twitter.com/mWxBpNiAdN
— B.S. Yediyurappa (@BSYBJP)