ಮಂಡ್ಯ ಮೈತ್ರಿ ಅಭ್ಯರ್ಥಿ ಇದೆಂಥಾ ಆರೋಪ, 20 ವರ್ಷದ ಹಿಂದಿನ ಘಟನೆ ನಿಜವೆ?

By Web DeskFirst Published Oct 19, 2018, 7:58 PM IST
Highlights

ಮಂಡ್ಯದ ಲೋಕಸಭೆ ಮೈತ್ರಿ ಸರಕಾರ ಅಭ್ಯರ್ಥಿ ಶಿವರಾಮೇಗೌಡರಿಗೆ ಇದೀಗ ಹೊಸ ಕಂಟಕ ಎದುರಾಗಿದೆ.  20 ವರ್ಷಗಳ ಹಿಂದಿನ ಆರೋಪ ಇದೀಗ ಶಿವರಾಮೇಗೌಡರನ್ನು ಕಾಡಲು ಆರಂಭಿಸಿದೆಯೇ?

ಮಂಡ್ಯ[ಅ.19]   20 ವರ್ಷಗಳ ಹಿಂದಿನ ಆ ಕೇಸ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. 20 ವರ್ಷಗಳ ಹಿಂದೆ ವಕೀಲ ಕೆಂಚನಹಳ್ಳಿ ಗಂಗಾಧರಮೂರ್ತಿ ಎಂಬುವರು ಪತ್ರಿಕೆ ವರದಿಗಾರರಾಗಿದ್ದರು. ಗಂಗಾಧರ್ ಮೂರ್ತಿ ಎಲ್. ಆರ್ .ಶಿವರಾಮೇಗೌಡರು ನಡೆಸುತ್ತಿದ್ದಾರೆ ಎಂದು ಹೇಳಲಾಗುವ ಅಕ್ರಮಗಳ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಸತತವಾಗಿ ವರದಿಮಾಡಿದ್ದರು. ಇಂಥ ಸಂದರ್ಭದಲ್ಲಿ ಗಂಗಾಧರ್ ಮೂರ್ತಿ  ಅವರ ಕೊಲೆಯಾಗಿತ್ತು.

ಈ ಕೊಲೆಯ ಹಿಂದೆ ಶಿವರಾಮೇಗೌಡರ ಕೈವಾಡವಿದೆ  ಎಂಬ ಆರೋಪದ ಸುದ್ದಿ ಸಹ ಅಂದು ಹರಡಿತ್ತು. ಪೋಲೀಸರು ಯಾವುದೇ ಕ್ರಮ ಕೈಗೊಳದಿದ್ದ ಕಾರಣ ನಾಗಮಂಗಲದಲ್ಲಿ ಸಾವಿರಾರು ಜನ ಪ್ರಗತಿಪರರು ಸಭೆ ಸೇರಿ ಪ್ರತಿಭಟನೆ ನಡೆಸಿದ್ದರು. ಈ ಸಭೆಯಲ್ಲಿ ಹೆಚ್.ಡಿ.ದೇವೇಗೌಡರು‌ ಕೂಡ ಭಾಗಿಯಾಗಿ ಶಿವರಾಮೇಗೌಡರ ವಿರುದ್ಧ ಕ್ರಮ‌ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಈ ವೇಳೆ ಬಾಯಿಗೆ ಕಪ್ಪು ಪಟ್ಟಿ ಧರಿಸಿದ್ದ ದೇವೇಗೌಡ ಗಂಗಾಧರ ಮೂರ್ತಿಯ ಫೋಟೋ ಹಿಡಿದು ಪ್ರತಿಭಟಿಸಿದ್ದರು. ಈ ವಿಚಾರವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ‌ ಭಾರಿ ಚರ್ಚೆಗೆ ಕಾರಣವಾಗಿದೆ. 

ಅಂದು ಶಿವರಾಮೇಗೌಡರಿಗೆ ಬಾಯಿಗೆ ಬಂದಂತೆ ಬೈದು ಪ್ರತಿಭಟಿಸಿದ್ದ ದೇವೆಗೌಡರು ಇಂದು ತಮ್ಮ ಪಕ್ಷದಿಂದ ಟಿಕೆಟ್ ನೀಡಿದ್ದಾರೆ. ಶಿವರಾಮೇಗೌಡರ ಪರವಾಗಿ ಭಾಷಣ ಮಾಡಲು ನಾಗಮಂಗಲಕ್ಕೆ ಅದೇ ಜಾಗಕ್ಕೆ ದೇವೇಗೌಡರು ಬರಬಹುದು. ಇದು ಹೇಗೆ ಎಂಬ ಪ್ರಶ್ನೆ ಹರಿದಾಡುತ್ತಿದೆ.

click me!