ಅಯ್ಯೋ ಹೀಗಾಗಬಾರದಿತ್ತು.. ಮಾಜಿ ಸಿಎಂ ಕ್ಷೇತ್ರಕ್ಕೆ ಏನೇನೂ ಇಲ್ಲ!

Published : Jul 05, 2018, 04:49 PM ISTUpdated : Jul 05, 2018, 04:51 PM IST
ಅಯ್ಯೋ ಹೀಗಾಗಬಾರದಿತ್ತು.. ಮಾಜಿ ಸಿಎಂ ಕ್ಷೇತ್ರಕ್ಕೆ ಏನೇನೂ ಇಲ್ಲ!

ಸಾರಾಂಶ

ವಿವಿಧ ಯೋಜನೆಗಳನ್ನು ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರೂ ಕುಮಾರಸ್ವಾಮಿ ಯಾವುದಕ್ಕೂ ಸ್ಪಂದಿಸಿದಂತೆ ಕಂಡು ಬಂದಿಲ್ಲ. ಬಜೆಟ್ ನಲ್ಲಿ ಸಿದ್ದರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರಕ್ಕೆ ಯಾವ ವಿಶೇಷ ಕೊಡುಗೆಯನ್ನು ನೀಡಲಾಗಿಲ್ಲ. 

ಬಾಗಲಕೋಟೆ(ಜು.5) ಮೈತ್ರಿ ಸರ್ಕಾರದ ಮೊದಲ ಬಜೆಟ್ ಬಾದಾಮಿ ಜನತೆಗೆ ಶಾಕ್ ನೀಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಬದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಜನತೆಯ ನಿರೀಕ್ಷೆಗಳು ಹುಸಿಯಾಗಿದೆ. ಪ್ರವಾಸೋದ್ಯಮ, ಜವಳಿಪಾರ್ಕ್,ಕೆರೆಗೆ ನೀರು ತುಂಬಿಸೋ ಯೋಜನೆ,ಕೈಗಾರಿಕಾ ಸ್ಥಾಪನೆ ಕುರಿತು ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡಿಲ್ಲದಿರುವುದು ಜನರ ಅತೃಪ್ತಿಗೆ ಕಾರಣವಾಗಿದೆ.

ಬದಾಮಿ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದರು. ಕುಮಾರಸ್ವಾಮಿ ಸಹ ಇದಕ್ಕೆ ಉತ್ತರ ಬರೆದಿದ್ದರು. ಆದರೆ ಬಜೆಟ್ ನಲ್ಲಿ ಸಿದ್ದರಾಮಯ್ಯ ಪತ್ರಕ್ಕೆ ಯಾವುದೆ ಮಕನ್ನಣೆ ಸಿಕ್ಕಿಲ್ಲ.

ಐತಿಹಾಸಿಕ ತಾಣ, ನೇಕಾರರ ಸಮಸ್ಯೆ ನಿವಾರಣೆ ಮತ್ತು ಮುಳುಗಡೆ ಸಂತ್ರಸ್ತರಿಗೆ ಬಜೆಟ್ ನಲ್ಲಿ ಉತ್ತರ ಸಿಗುತ್ತದೆ ಎಂದು ಭಾವಿಸಿದ್ದರು. ಬಾದಾಮಿ, ಗುಳೇದಗುಡ್ಡಕ್ಕೆ ಬಂದಾಗ ಪ್ರವಾಸಿತಾಣ ಅಭಿವೃದ್ಧಿ. ನೇಕಾರರ ಉತ್ತೇಜನ ಕುರಿತು ವಾಗ್ದಾನ ನೀಡಿದ್ದರು. ಒಂದು ಕಡೆ ಕುಮಾರಸ್ವಾಮಿ ಮಾತಿಗೆ ತಪ್ಪಿದ್ದರೆ ಇನ್ನೊಂದು ಕಡೆ ಸಿದ್ದರಾಮಯ್ಯ ತಮ್ಮ ಸ್ವ ಕ್ಷೇತ್ರಕ್ಕೆ ಯೋಜನೆಗಳನ್ನು ಕೊಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ