ಲೋಕಸಭೆ ಚುನಾವಣೆ ಮುನ್ನ ಬಿಜೆಪಿಗೆ ಮತ್ತೊಂದು ಶಾಕ್

Published : Jul 05, 2018, 04:28 PM IST
ಲೋಕಸಭೆ ಚುನಾವಣೆ ಮುನ್ನ ಬಿಜೆಪಿಗೆ ಮತ್ತೊಂದು ಶಾಕ್

ಸಾರಾಂಶ

ತ್ರಿಪುರದ ಮೈತ್ರಿ ಪಕ್ಷ  ಐಪಿಎಫ್ ಟಿ ಲೋಕಸಭೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧಾರ ಕಳೆದ ವರ್ಷ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ವಿಜಯ ಸಾಧಿಸಿ ಬಿಪ್ ಲಾಬ್ ಕುಮಾರ್ ದೇಬ್  ಮುಖ್ಯಮಂತ್ರಿಯಾಗಿದ್ದರು

ಅಗರ್ತಲ[ಜು.05]: ತ್ರಿಪುರ ರಾಜ್ಯದ ಬಿಜೆಪಿ ಮೈತ್ರಿ ಪಕ್ಷವಾದ  ಐ ಪಿಎಫ್ ಟಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಆಡಳಿತ ಪಕ್ಷಕ್ಕೆ ಕೈಕೊಟ್ಟು ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದೆ.

ತ್ರಿಪುರದಲ್ಲಿ ಒಟ್ಟು 2 ಲೋಕಸಭಾ ಸ್ಥಾನವಿದ್ದು ಎರಡರಲ್ಲೂ ಕಳೆದ ಚುನಾವಣೆಯಲ್ಲಿ ಸಿಪಿಎಂ ಜಯಗಳಿಸಿತ್ತು. ಈಶಾನ್ಯ ರಾಜ್ಯದ  ಪ್ರಮುಖ ಪಕ್ಷವಾದ  ಐಪಿಎಫ್ ಟಿ ಜೊತೆ ಈ ವರ್ಷದ ಜನವರಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿತ್ತು.

ಎರಡೂ ಪಕ್ಷಗಳ ಹೊಂದಾಣಿಕೆಯಂತೆ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತಂತೆ ಮಾತುಕತೆ ನಡೆದಿತ್ತು. ಆದರೆ ಒಂದೆರಡು ತಿಂಗಳ ಹಿಂದೆ ಎರಡೂ ಪಕ್ಷಗಳಿಗೂ ಹೊಂದಾಣಿಕೆ  ಕೂಡಿಬಾರದ ಕಾರಣ ಪ್ರತ್ಯೇಕವಾಗಿ ಸ್ಪರ್ಧಿಸಲು ಎರಡೂ ಪಕ್ಷದ ನಾಯಕರು ತಿಳಿಸಿದ್ದಾರೆ.

ಸಿಬಿಐ ಐ ಪಿಎಫ್ ಟಿನ ಒರ್ವ ಶಾಸಕ ಒಳಗೊಂಡಂತೆ ಮೂವರು ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ದಾಳಿ ನಡೆಸಿತ್ತು. ಈ ಘಟನೆ ಎರಡೂ ನಾಯಕರಲ್ಲೂ ಮನಸ್ತಾಪಕ್ಕೆ ಕಾರಣವಾಗಿತ್ತು. ಕಳೆದ ವರ್ಷ ನಡೆದ ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ 25 ವರ್ಷದಿಂದ ಅಧಿಕಾರದಲ್ಲಿದ್ದ ಸಿಪಿಎಂ ಪಕ್ಷವನ್ನು ಮಣಿಸಿ ಬಿಜೆಪಿ ಮೈತ್ರಿಕೂಟ ಪಕ್ಷ ವಿಜಯ ಸಾಧಿಸಿ ರಾಜ್ಯಾಧ್ಯಕ್ಷ  ಬಿಪ್ ಲಾಬ್ ಕುಮಾರ್ ದೇಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ