ಕುಮಾರಸ್ವಾಮಿ ಬಜೆಟ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗೆ ಏನೇನು?

First Published Jul 5, 2018, 3:06 PM IST
Highlights

ಸಿಎಂ ಕುಮಾರಸ್ವಾಮಿ ಇಂದು ಮಂಡಿಸಿರುವ ಬಜೆಟ್ ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ಯಾವ ಯಾವ ಜಿಲ್ಲೆಗಳಿಗೆ ಆದ್ಯತೆ ನೀಡಿದ್ದಾರೆ ನೋಡಿಕೊಂಡು ಬನ್ನಿ

ಬೆಂಗಳೂರು(ಜು.5): ಸಿಎಂ ಕುಮಾರಸ್ವಾಮಿ ಇಂದು ಮಂಡಿಸಿರುವ ಬಜೆಟ್ ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ'.

ಕಲುಬುರ್ಗಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಉಪಕರಣ ತಯಾರಿಕೆ ಘಟಕ ನಿರ್ಮಾಣಕ್ಕೆ ಬಜೆಟ್ ಒಪ್ಪಿಗೆ ನೀಡಿದೆ. ಜತೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್​ಇಡಿ ಲೈಟ್ ಉತ್ಪಾದನಾ ಉದ್ಯಮ, ಸಿಎಂ ತವರು ಹಾಸನ ಜಿಲ್ಲೆಯಲ್ಲಿ ನೆಲಹಾಸು & ಸ್ಯಾನಿಟರಿ ಉತ್ಪಾದನಾ ಘಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆ, ಮೈಸೂರು ಜಿಲ್ಲೆಯಲ್ಲಿ ICB ಚಿಪ್ ತಯಾರಿಸುವ ಸಂಸ್ಥೆ ಸ್ಥಾಪನೆ , ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮಕ್ಕೆ ಒತ್ತು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಬಿಡಿ ಘಟಕಗಳ ಉದ್ಯಮ, ತುಮಕೂರು ಜಿಲ್ಲೆಯಲ್ಲಿ ಫಿಟ್​ನೆಸ್ ವಸ್ತು ಉದ್ಯಮ ಸ್ಥಾಪನೆ, ಬೀದರ್ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಸಂರಕ್ಷಣೆ ಯಂತ್ರ ಉತ್ಪಾದನಾ ಘಟಕ ಆರಂಭಿಸಲಾಗುತ್ತದೆ.

9 ಜಿಲ್ಲೆಗಳಲ್ಲಿ ಹೊಸ ಉದ್ಯಮ ಸ್ಥಾಪನೆಗೆ 2 ಸಾವಿರ ಕೋಟಿ ಬಂಡವಾಳ ಹೂಡಿಕೆಗೂ ಬಜೆಟ್ ತೀರ್ಮಾನ ಮಾಡಿದೆ. ಜೈವಿಕವಾಗಿ ಪರ್ಯಾಯ ಪ್ಯಾಕಿಂಗ್ ಸಂಸ್ಥೆ ತೆರೆಯಲು 5 ಕೋಟಿ ರೂ. ಮೀಸಲಿಡಲಾಗಿದೆ.ಬೀದರ್ ನಲ್ಲಿ  ಕೃಷಿ ಉಪಕರಣಗಳ ತಯಾರಿಕೆಗಾಗಿ 2000 ಕೋಟಿ ರು ಬಂಡವಾಳ ಹೂಡಿಕೆ. ಮುಂಬರುವ ವರ್ಷಗಳಲ್ಲಿ ರಾಜ್ಯದ 7 ಜಿಲ್ಲೆಗಳಲ್ಲಿ 14 ಸಾವಿರ ಕೋಟಿ ರು ಬಂಡವಾಳ ಹೂಡಿ  8 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ಕುಮಾರಸ್ವಾಮಿ ಬಜೆಟ್ ನಲ್ಲಿ ತಿಳಿಸಿದ್ದಾರೆ.

click me!