ಸಾಲ ಮನ್ನಾ: ರೈತರು ತಿಳಿದಿರಬೇಕಾದ 7  ಅಂಶಗಳು

First Published Jul 5, 2018, 2:35 PM IST
Highlights

ಮೈತ್ರಿ ಸರ್ಕಾರದ ಮೊದಲನೇ ಬಜೆಟ್ ನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದ್ದಾರೆ. ಬಹುಚರ್ಚೆಗೊಳಗಾಗಿದ್ದ ರೈತರ ಸಾಲ ಮನ್ನಾ ಬಗ್ಗೆ ಬಜೆಟ್‌ನಲ್ಲಿ ಏನು ಹೇಳಿದ್ದಾರೆ ನೋಡೋಣ:

  1. ಹಿಂದಿನ ಸರ್ಕಾರ ಸಹಕಾರಿ ಬ್ಯಾಂಕ್​ಗಳಲ್ಲಿರುವ  8, 165 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿತ್ತು. . ಅದರಲ್ಲಿ 4,165 ಕೋಟಿ ರೂ. ಹಿಂದಿನ ವರ್ಷವೇ ಬಿಡುಗಡೆ ಮಾಡಲಾಗಿತ್ತು.  ಉಳಿದ 4 ಸಾವಿರ ಕೋಟಿ ರೂ.ಗಳನ್ನು ಪಾವತಿಸಲು ಈ ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ
  2. ಒಟ್ಟು  34 ಸಾವಿರ ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಲು ನಿರ್ಧರಿಸಲಾಗಿದೆ.  2017 ಡಿಸೆಂಬರ್ 31 ರ ವರೆಗೆ ರೈತರು ‌ಮಾಡಿದ  2 ಲಕ್ಷರೂಪಾಯಿವರೆಗಿನ  ಎಲ್ಲ ಸುಸ್ತಿ ಬೆಳೆ ಸಾಲ ಒಂದೇ ಹಂತದಲ್ಲಿ ಮನ್ನಾವಾಗಲಿದೆ. 
  3. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ರೈತರಿಗೂ ಸಹ ಅನುಕೂಲ ಮಾಡಿಕೊಡಲು, ಸುಸ್ತಿದಾರರಲ್ಲದ ರೈತರ ಸಾಲ ಖಾತೆಗಳಿಗೆ ಉತ್ತೇಜನಕಾತರಿಯಾಗಿ ಪ್ರತಿ ಖಾತೆಗೆ  ಅವರು ಮರು ಪಾವತಿ ಮಾಡಿರುವ ಸಾಲದ ಮೊತ್ತ ಅಥವಾ  25 ಸಾವಿರ ರೂ. [ಯಾವುದು ಕಡಿಮೆಯೋ] ಅದನ್ನು ತುಂಬಲು ನಿರ್ಧಾರ.
  4. ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಗೂ ಕುಟುಂಬಸ್ಥರು, ಕಳೆದ 3 ವರ್ಷದಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರು, ಅನರ್ಹ ಕೃಷಿ ಸಾಲಗಾರರು ಸಾಲಮನ್ನಾ ಯೋಜನೆಯಿಂದ ಹೊರಗಿಡಲಾಗಿದೆ.
  5. ದೊಡ್ಡ ಭೂ ಹಿಡುವಳಿ ಹೊಂದಿರುವ ರೈತರ ಸಾಲಗಳು 40 ಲಕ್ಷ ಮೀರಿವೆ  , ಹೆಚ್ಚಿನ ಮೊತ್ತದ ಬೆಳೆ ಸಾಲಮನ್ನಾ ಮಾಡುವುದು ಸರಿಯಾದ ಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಸಾಲದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲು ನಿರ್ಧಾರ: ಸಿಎಂ ಕುಮಾರಸ್ವಾಮಿ
  6. ರೈತರಿಗೆ ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಅವರ ಸುಸ್ತಿ ಖಾತೆಯಲ್ಲಿರುವ ಬಾಕಿಯನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ನೀಡಲು ಕ್ರಮ 
  7. ಈ ಉದ್ದೇಶಕ್ಕಾಗಿ 2018-19ರ ಬಜೆಟ್ ನಲ್ಲಿ 6500 ಕೋಟಿ ರೂ. ನಿಗದಿ
click me!