ವಿಶ್ವಾಸಕ್ಕೂ ಮುನ್ನ ವಿಪಕ್ಷಗಳ ಸಹಕಾರ ಕೇಳಿದ ಬಿಜೆಪಿ, ಯಾಕಾಗಿ?

By Web DeskFirst Published Jul 28, 2019, 9:37 PM IST
Highlights

ವಿಶ್ವಾಸ ಮತಯಾಚನೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಭಾನುವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ನಡಾವಳಿಗಳನ್ನು ಸ್ಪಷ್ಟ ಮಾಡಿಕೊಂಡಿದೆ. 

ಬೆಂಗಳೂರು[ಜು. 28]  ಬಿಜೆಪಿ ಶಾಸಕಾಂಗ ಸಭೆ ಮುಗಿದಿದ್ದು  ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿದ್ದಾರೆ.

ನಾಳೆ ಬಹುಮತ ಸಾಬೀತಾಯಿತು ಪಡಿಸುವ ಬಗ್ಗೆ ಚರ್ಚೆಯಾಗಿದೆ. ಬೆಳ್ಳಗ್ಗೆ 10.30 ಕ್ಕೆ ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲ ಕಾಲ ಶಾಸಕರ ಜೊತೆ ಚರ್ಚೆ ಮಾಡಲಾಗತ್ತೆ. ಇದಾದ ನಂತರ 105 ಶಾಸಕರ ಒಟ್ಟಿಗೆ ವಿಧಾನಸಭೆ ಅಧಿವೇಶನಕ್ಕೆ ಹೋಗುತ್ತೇವೆ ಎಂದು ಜೇಳಿದರು.

BSY ವಿಶ್ವಾಸ ಗೆಲ್ತಾರಾ? ಇಲ್ಲಿದೆ ಅಂಕಿ ಅಂಶಗಳ ಫುಲ್ ಡಿಟೇಲ್ಸ್

ಧನವಿನಿಯೋಗ ಬಿಲ್ ಪಾಸ್ ಮಾಡುವುದರ ಬಗ್ಗೆ ಕೂಡ ಚರ್ಚೆ ಮಾಡಲಾಗಿದೆ. ಎಲ್ಲಾ ಪಕ್ಷಗಳನ್ನು ಧನ ವಿನಿಯೋಗ್ ಬಿಲ್ ಪಾಸ್ ಮಾಡಲಿಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಕೂಡ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ ಎಂದರು.

ಅತೃಪ್ತ ಶಾಸಕರನ್ನು ಅನರ್ಹತೆ  ಮಾಡಿರುವ ಸ್ಪೀಕರ್ ನಿರ್ಧಾರ ವನ್ನು ಬಿಜೆಪಿ ಖಂಡಿಸುತ್ತದೆ. ಜೆಡಿಎಸ್ ಬಾಹ್ಯ ಬೆಂಬಲ ವಿಚಾರದ ದ್ರ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಮೊದಲು ಜೆಡಿಎಸ್ ವರಿಷ್ಠರು ನಿರ್ಧಾರ ಮಾಡಲಿ ಎಂದು ರವಿಕುಮಾರ್ ಹೇಳಿದರು.

click me!