ಇಸ್ರೇಲ್ ಚುನಾವಣೆ: ಎಲ್ಲೆಲ್ಲೂ ಮಿಂಚುತ್ತಿರುವ ಪ್ರಧಾನಿ ಮೋದಿ ಪೋಸ್ಟರ್!

By Web DeskFirst Published Jul 28, 2019, 9:30 PM IST
Highlights

ದಿನದಿಂದ ದಿನಕ್ಕೆ ರಂಗೇರುತ್ತಿರುವ ಇಸ್ರೇಲ್ ಚುನಾವಣಾ ಕಣ| ಚುನಾವಣಾ ಪೋಸ್ಟರ್’ಗಳಲ್ಲಿ ರಾರಾಜಿಸುತ್ತಿರುವ ಭಾರತದ ಪ್ರಧಾನಿ| ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು| ಇಸ್ರೇಲ್ ನಗರಗಳ ಕಟ್ಟಡಗಳ ಮೇಲೆ ರಾರಾಜಿಸುತ್ತಿದ್ದಾರೆ ಪ್ರಧಾನಿ ಮೋದಿ| ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್  ಫೋಟೋಗಳು| ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡ ಇಸ್ರೇಲ್ ಪತ್ರಕರ್ತ ಅಮಿಚೈ ಸ್ಟೇಯಿನ್| 

ಇಸ್ರೇಲ್(ಜು.28): ಇಸ್ರೇಲ್'ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ವಿಚಿತ್ರ ಎಂಬಂತೆ ಇಸ್ರೇಲ್ ಚುನಾವಣಾ ಬ್ಯಾನರ್’ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚುತ್ತಿದ್ದಾರೆ. 

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಇಸ್ರೇಲ್ ನಗರಗಳ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.

& this is the official ad https://t.co/yueGBqcu1U pic.twitter.com/jFm0nNTDSY

— Amichai Stein (@AmichaiStein1)

ಕಟ್ಟಡವೊಂದರ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಇರುವ ಎಲೆಕ್ಷನ್ ಬ್ಯಾನರ್’ವೊಂದನ್ನು, ಇಸ್ರೇಲ್ ಪತ್ರಕರ್ತ ಅಮಿಚೈ ಸ್ಟೇಯಿನ್  ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  

ಕೇವಲ ಪ್ರಧಾನಿ ಮೋದಿ ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆಗೆ ನೇತನ್ಯಾಹು ಇರುವ ಪೋಟೋಗಳು ಕೂಡ ರಾರಾಜಿಸುತ್ತಿರುವುದು ವಿಶೇಷ.
 

click me!