ನಕಲಿ ಕರ್ನಾಟಕ ಬ್ಯಾಂಕ್ ಬ್ರ್ಯಾಂಚ್'ನ್ನೇ ತೆರೆದ ಭೂಪ, ಜನರು ಠೇವಣಿಯನ್ನು ಇಟ್ಟರು : ಉತ್ತರದ ರಾಜ್ಯದಲ್ಲಿ ನಡೆಯಿತು ಘಟನೆ

By Suvarna Web DeskFirst Published Mar 30, 2018, 7:19 AM IST
Highlights

ದಾಖಲೆಗಳನ್ನು ಪರಿಶೀಲಿಸಿದಾಗ ಮುಲಾಯಂ ನಗರದಲ್ಲಿ ಬ್ಯಾಂಕ್ ಶಾಖೆಯಿಲ್ಲದಿರುವುದು ಕಂಡು ಬಂತು. ತಕ್ಷಣವೇ ಕರೆ ಮಾಡಿದ್ದ ವ್ಯಕ್ತಿಯನ್ನು ಸಂಪರ್ಕಿಸಿ, ‘ನಕಲಿ’ ಶಾಖೆಯ ಫೋಟೋೀ ತೆಗೆದು ವಾಟ್ಸಪ್ ಮೂಲಕ ಕಳುಹಿಸಿಕೊಡುವಂತೆ ವಿನಂತಿಸಲಾಯಿತು. ಫೋಟೋ ಸ್ವೀಕರಿಸಿದಾಗ, ಬ್ಯಾಂಕ್ ಅಧಿಕಾರಿಗಳಿಗೆ ಆಶ್ಚರ್ಯ ಕಾದಿತ್ತು. ಕಾರ್ಯ ಪ್ರವೃತ್ತರಾದ ಹೆಚ್ಚುವರಿ ಜನರಲ್ ಮ್ಯಾನೆಜರ್ (ಎಜಿಎಂ) ಬಿ.ಬಿ.ಎಚ್. ಉಪಾಧ್ಯಾಯ ವಾರಾಣಸಿಗೆ ತೆರಳಿದರು.

ಲಖನೌ(ಮಾ.30):  ಬ್ಯಾಂಕ್ಗಳಿಂ ದ ಸಾಲ ಪಡೆ ದು ಹಿಂದಿರುಗಿಸ ದೆ ವಂಚಿಸಿ ವಿದೇಶಕ್ಕೆ ಪರಾರಿಯಾ ದವರ ಸಾಕಷ್ಟು ಕತೆಗಳು ಒಂದೊಂದಾಗಿ ಹೊರಬರುತ್ತಿರುವ ನಡುವೆ, ಊಹಿಸಲೂ ಅಸಾಧ್ಯವಾದ ಹೊಸ ಮಾ ದರಿಯ ವಂಚನೆಯೊಂ ದು ಬಯಲಿಗೆ ಬಂದಿದೆ.

ಅಂದರೆ, ಇಲ್ಲೊಬ್ಬ  ನಕಲಿ  ಬ್ಯಾಂಕ್  ಶಾಖೆಯೊಂದನ್ನೇ ತೆರೆದು ವಂಚಿಸಿ, ಬಂಧಿಸಲ್ಪಟ್ಟಿದ್ದಾನೆ. ಅದರಲ್ಲೂ ಆತ ಕರ್ನಾಟಕ ಮೂಲ ದ ಪ್ರಮುಖ ಖಾಸಗಿ  ಬ್ಯಾಂಕ್ ಎನ್ನಿಸಿಕೊಂಡಿರುವ ‘ಕರ್ನಾಟಕ  ಬ್ಯಾಂಕ್’ನ ನಕಲಿ ಶಾಖೆಯೊಂ ದನ್ನು ತೆರೆ ದು, ವ್ಯವಹಾರ ನಡೆಸಲು ಯತ್ನಿಸಿ ದಾನೆ. ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಮುಲಾಯಂ ನಗರದಲ್ಲಿ ಬದಾಯೂಂ ಮೂಲದ ಅಶ್ಫಾಕ್ ಅಹಮದ್  ಎಂಬಾತ ವಿನೋದ್  ಕುಮಾರ್  ಕಾಂಬಳೆ ಎಂಬ ಹೆಸರಿನಲ್ಲಿ, ಶಾಖೆ ಮ್ಯಾನೇಜರ್ ಎಂದು ಹೇಳಿಕೊಂಡು ಕರ್ನಾಟಕ  ಬ್ಯಾಂಕ್ ಲಿಮಿಟೆಡ್'ನ ನಕಲಿ ಶಾಖೆ ತೆರೆದಿದ್ದ. ನಕಲಿ ಆಧಾರ್, ಹಾಗೂ ಇತರ ಗುರುತು ಚೀಟಿಗಳನ್ನು ಪಡೆದಿದ್ದ. ಆತನ ಗುರುತು ಚೀಟಿಯ ಪ್ರಕಾರ, ಆತ ಪಶ್ಚಿಮ ಮುಂಬೈಗೆ ಸೇರಿದವನೆಂದು ಮುದ್ರಿಸಲಾಗಿದೆ. ಸ್ಥಳೀಯರಿಂದ 15 ಉಳಿತಾಯ ಖಾತೆಗಳನ್ನು ತೆರೆಸಿದ ಅಹ್ಮದ್ , ಅವರಿಂದ 1.37 ಲಕ್ಷ ರು. ನಗದನ್ನು ಠೇವಣಿ ರೂಪ ದಲ್ಲಿ ಸಂಗ್ರಹಿಸಿದ.

ಬೆಳಕಿಗೆ ಬಂ ದದು ಹೇಗೆ?:  ದೆಹಲಿಯ ಕರ್ನಾಟಕ  ಬ್ಯಾಂಕ್  ಶಾಖೆಗೆ  ದೂರವಾಣಿ ಕರೆಯೊಂದು ಬಂದಿತ್ತು. ಕರೆ ಮಾಡಿದ ವ್ಯಕ್ತಿ ಮುಲಾಯಂ ನಗರ ಶಾಖೆಯ ಚಟುವಟಿಕೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಷಯದ ಬಗ್ಗೆ ತನಿಖೆಗೆ ಮುಂದಾದರು. ದಾಖಲೆಗಳನ್ನು ಪರಿಶೀಲಿಸಿದಾಗ ಮುಲಾಯಂ ನಗರದಲ್ಲಿ ಬ್ಯಾಂಕ್ ಶಾಖೆಯಿಲ್ಲದಿರುವುದು ಕಂಡು ಬಂತು. ತಕ್ಷಣವೇ ಕರೆ ಮಾಡಿದ್ದ ವ್ಯಕ್ತಿಯನ್ನು ಸಂಪರ್ಕಿಸಿ, ‘ನಕಲಿ’ ಶಾಖೆಯ ಫೋಟೋೀ ತೆಗೆದು ವಾಟ್ಸಪ್ ಮೂಲಕ ಕಳುಹಿಸಿಕೊಡುವಂತೆ ವಿನಂತಿಸಲಾಯಿತು. ಫೋಟೋ ಸ್ವೀಕರಿಸಿದಾಗ, ಬ್ಯಾಂಕ್ ಅಧಿಕಾರಿಗಳಿಗೆ ಆಶ್ಚರ್ಯ

ಕಾದಿತ್ತು. ಕಾರ್ಯ ಪ್ರವೃತ್ತರಾದ ಹೆಚ್ಚುವರಿ ಜನರಲ್ ಮ್ಯಾನೆಜರ್ (ಎಜಿಎಂ) ಬಿ.ಬಿ.ಎಚ್. ಉಪಾಧ್ಯಾಯ ವಾರಾಣಸಿಗೆ ತೆರಳಿದರು. ವಾರಾಣಸಿ ಶಾಖೆಯ ಮುಖ್ಯಸ್ಥರೊಂದಿಗೆ ಅವರು ಬಲಿಯಾಗೆ ಪ್ರಯಾಣಿಸಿದರು. ಅಲ್ಲಿ ಪೊಲೀಸರ ಸಹಕಾರದೊಂದಿಗೆ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶಾಖೆಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಯಿತು.

ಒಂದು ತಿಂಗಳಿನಿಂದ ಕಾರ್ಯ ನಿರ್ವಹಣೆ!: ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದಾಗ, ನಕಲಿ ಶಾಖೆ ಆರಂಭವಾಗಿ ಒಂದು ತಿಂಗಳಾಗಿತ್ತು. ಮುಲಾಯಂ ನಗರದ ನಿವೃತ್ತ ಸೇನಾಧಿಕಾರಿಯೊಬ್ಬರ ಮನೆಯಲ್ಲಿ ಮಾಸಿಕ 32,000 ರು. ಬಾಡಿಗೆಗೆ ಕಟ್ಟಡ ಪಡೆದು ಶಾಖೆ ತೆರೆಯಲಾಗಿತ್ತು. ಮನೆ ಮಾಲೀಕನಿಗೆ ಅಹ್ಮದ್ ಬಾಡಿಗೆ ಕೂಡ ಪಾವತಿಸಿರಲಿಲ್ಲ. ಶಾಖೆಗೆ ಖರೀದಿ ಮಾಡಲಾದ ಪೀಠೋಪಕರಣಗಳ ಬಿಲ್ ಕೂಡ ಪಾವತಿಸಿರಲಿಲ್ಲ. 15 ಮಂದಿಯಿಂದ ಖಾತೆ ತೆರೆಸಲಾಗಿತ್ತು. ಖಾತೆ ತೆರೆಯಲು ಕನಿಷ್ಠ ಮೊತ್ತ 1000 ರು. ಪಡೆಯಲಾಗಿತ್ತು. ಅಲ್ಲದೆ, ಸ್ಥಳೀಯರಿಂದ 30,೦೦೦ ರು.ಯಿಂದ 70,೦೦೦ ರು. ವರೆಗೆ ಠೇವಣಿ ಪಡೆದು ವಂಚಿಸಲಾಗಿತ್ತು. ಗ್ರಾಹಕರಿಗೆ ಪಾಸ್ ಬುಕ್ಕನ್ನೂ ನೀಡಲಾಗಿತ್ತು.

ಕಚೇರಿ ವ್ಯವಸ್ಥಿತವಾಗಿತ್ತು: ಪೊಲೀಸರು ಶಾಖೆಗೆ ತೆರಳಿದಾಗ ಅಹ್ಮದ್ ತನ್ನ ಚೇಂಬರ್‌ನಲ್ಲಿ ಕುಳಿತಿದ್ದ, ಇತರ ಐವರು ನೌಕರರು ವ್ಯವಸ್ಥಿತವಾಗಿ ತಮ್ಮ ತಮ್ಮ ಟೇಬಲ್ ಗಳಲ್ಲಿ ಕಂಪ್ಯೂಟರ್ ಮುಂದೆ ಕಾರ್ಯ ನಿರತರಾಗಿದ್ದರು. ಶಾಖೆಯ ಆರ್‌ಬಿಐ ಪರವಾನಗಿ, ಬ್ಯಾಂಕ್ ಕೇಂದ್ರ ಕಚೇರಿಯ ಅನುಮತಿ ದಾಖಲೆ, ಅಹ್ಮದ್ ಮತ್ತು ಸಿಬ್ಬಂದಿಯ ನೇಮಕಾತಿ ಪತ್ರ ಕೇಳಿದಾಗ, ಆತನ ಬಳಿ ಏನೂ ಇರಲಿಲ್ಲ. ಈತ ನೇಮಿಸಿಕೊಂಡ ೫ ನೌಕರರು ಸ್ಥಳೀಯರಾಗಿದ್ದು, ಅವರನ್ನು 5,೦೦೦ ರು.ಗೆ ನೇಮಕ ಮಾಡಿಕೊಳ್ಳಲಾಗಿತ್ತು. ಅವರಿಗೆ ಇದೊಂದು ನಕಲಿ ಶಾಖೆ ಎಂಬ ಅರಿವಿರಲಿಲ್ಲ. ಅಂದರೆ ಅವರಿಗೂ ಅಹ್ಮದ್ ವಂಚಿಸಿದ್ದ. ಹೀಗಾಗಿ ‘ನೌಕರರಿಗೆ’ ಕ್ಲೀನ್‌ಚಿಟ್ ನೀಡಲಾಗಿದೆ.

ಕಾರ್ಯಾಚರಣೆಯ ವೇಳೆ 1.37 ಲಕ್ಷ ರು. ನಗದು, ಮೂರು ಕಂಪ್ಯೂಟರ್, ಲ್ಯಾಪ್‌ಟಾಪ್, ಎರಡು ಮೊಬೈಲ್, ಪ್ರಿಂಟರ್, ಕೆಲವು ಬ್ಯಾಂಕ್ ಪಾಸ್‌ಬುಕ್ ಸಹಿತ ಬ್ಯಾಂಕ್‌ಗೆ ಬೇಕಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

click me!