ಜಯನಗರ ಟಿಕೆಟ್ ‘ಗಾಗಿ ಜಾರ್ಜ್ - ಪರಮೇಶ್ವರ್ ಭಿನ್ನಾಭಿಪ್ರಾಯ

By Suvarna Web DeskFirst Published Mar 29, 2018, 8:14 AM IST
Highlights

ನಗರದ ಜಯನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನಡುವೆ ಸಭೆಯಲ್ಲಿ ಅಭಿಪ್ರಾಯ ಬೇಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ

ಬೆಂಗಳೂರು: ನಗರದ ಜಯನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನಡುವೆ ಸಭೆಯಲ್ಲಿ ಅಭಿಪ್ರಾಯ ಬೇಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಟಿಕೆಟ್ ನೀಡಬೇಕು. ಬಿಟಿಎಂ ಬಡಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಮೊದಲು ರಾಮಲಿಂಗಾರೆಡ್ಡಿ ಅವರು ಜಯನಗರದಲ್ಲಿ ಮೂರು ಬಾರಿ ಜಯಗಳಿಸಿದ್ದರು. ಹೀಗಾಗಿ ಕ್ಷೇತ್ರದ ಜನರೊಂದಿಗೆ ಒಡನಾಟ ಹೊಂದಿರುವುದರಿಂದ ಅವರ ಪುತ್ರಿಗೆ ಟಿಕೆಟ್ ನೀಡಬೇಕು ಎಂದು ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟರು.

ಈ ವೇಳೆ ಒಂದೇ ಹೆಸರು ಅಂತಿಮ ಗೊಳಿಸಲು ಸಾಧ್ಯವಿಲ್ಲ. ಸೌಮ್ಯಾರೆಡ್ಡಿ ಜತೆಗೆ ಮತ್ತೊಬ್ಬ ಆಕಾಂಕ್ಷಿಯಾಗಿರುವ ಎಂ.ಸಿ. ವೇಣುಗೋಪಾಲ್ ಹೆಸರೂ ಕೂಡ ಎಐಸಿಸಿಗೆ ಶಿಫಾರಸು ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸ್ಪಷ್ಟಪಡಿಸಿದರು. ಈ ವೇಳೆ ಇಬ್ಬರ ನಡುವೆ ಮಾತುಗಳ ವಿನಿಮಯ ನಡೆಯಿತು ಎಂದು ಮೂಲಗಳು ತಿಳಿಸಿವೆ.

click me!