ಗೂಢಚರ್ಯೆ ಮಾಡುತ್ತಂತೆ ಫೇಸ್ಬುಕ್

By Suvarna Web DeskFirst Published Mar 29, 2018, 7:48 AM IST
Highlights

ಬಳಕೆದಾರರ ಮಾಹಿತಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಹೊತ್ತಿರುವ ಸಾಮಾಜಿಕ ಮಾಧ್ಯಮ ಫೇಸ್ ಬುಕ್‌ಗೆ ತನ್ನ ಬಳಕೆದಾರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬಿತ್ಯಾದಿ ಚಟುವಟಿಕೆಗಳ ಮೇಲೆ ಗೂಢಚಾರಿಕೆ ನಡೆಸುವ ಸಾಮರ್ಥ್ಯ ಇದೆ ಎಂದು ಈ ಪ್ರಕರಣದ ಪ್ರಮುಖ ಮಾಹಿತಿದಾರ ಕ್ರಿಸ್ಟೋಫರ್ ವೈಲಿ ಹೇಳಿದ್ದಾರೆ.

ಲಂಡನ್: ಬಳಕೆದಾರರ ಮಾಹಿತಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಹೊತ್ತಿರುವ ಸಾಮಾಜಿಕ ಮಾಧ್ಯಮ ಫೇಸ್ ಬುಕ್‌ಗೆ ತನ್ನ ಬಳಕೆದಾರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬಿತ್ಯಾದಿ ಚಟುವಟಿಕೆಗಳ ಮೇಲೆ ಗೂಢಚಾರಿಕೆ ನಡೆಸುವ ಸಾಮರ್ಥ್ಯ ಇದೆ ಎಂದು ಈ ಪ್ರಕರಣದ ಪ್ರಮುಖ ಮಾಹಿತಿದಾರ ಕ್ರಿಸ್ಟೋಫರ್ ವೈಲಿ ಹೇಳಿದ್ದಾರೆ.

ಬ್ರಿಟನ್ ಸಂಸತ್ತಿನಲ್ಲಿ ಹಾಜರಾಗಿ ಸಂಸದರ ಪ್ರಶ್ನೆ ಉತ್ತರಿಸಿದ ವೈಲಿ, ‘ಫೇಸ್‌ಬುಕ್‌ನಂತಹ ಆ್ಯಪ್‌ಗಳು ಮೊಬೈಲ್ ಫೋನ್ ನಲ್ಲಿನ ಮೈಕ್ರೋಫೋನ್ ಬಳಸಿ, ಬಳಕೆದಾರರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತವೆ. ಇದನ್ನು ಆಧರಿಸಿಯೇ ಬಳಕೆದಾರರ ಮೇಲೆ ಜಾಹೀರಾತುಗಳ ಮೂಲಕ ಪ್ರಭಾವ ಬೀರಲು ಯತ್ನಿ ಸುತ್ತವೆ’.

‘ಫೇಸ್‌ಬುಕ್ ಬಳಕೆದಾರ ಜನಜಂಗುಳಿಯಲ್ಲಿದ್ದಾನೆಯೇ, ಮನೆಯಲ್ಲಿದ್ದಾನೆಯೇ, ಕಚೇರಿಯಲ್ಲಿದ್ದಾನೆಯೇ ಎಂಬುದರ ಮೇಲೆ ಫೇಸ್‌ಬುಕ್ ಸೇರಿದಂತೆ ಅನೇಕ ಆ್ಯಪ್‌ಗಳು ನಿಗಾ ವಹಿಸಿತ್ತವೆ. ಫೋನ್‌ನಲ್ಲಿನ ಮೈಕ್ರೋಫೋನ್ ಮುಖಾಂತರ ಈ ಪತ್ತೇದಾರಿಕೆ ನಡೆಸುತ್ತವೆ’ ಎಂದರು.

click me!